ಬುದ್ದನ ಕರುಣಿ ಪ್ರಜ್ಞೆ ಇಂದು ಅಗತ್ಯವಾಗಿದೆ ಡಾ.ಸುಜಾತಾ.ಚಲವಾದಿ
ಭಾರತೀಯ ಬೌದ್ದ ಮಹಾಸಭಾ, ಸಮತಾ ಸೈನಿಕ ದಳ ಹಾಗೂ ಮಹಿಳಾ ಘಟಕ ವಿಜಯಪುರ ಇವರ ಆಶ್ರಯದಲ್ಲಿ ನಡೆದ ವರ್ಷಾವಾಸ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಜ್ಞೆ,ಶೀಲ,ಕರುಣಿ ಎಂಬ ತತ್ವ ಈಡೀ ಪ್ರಪಂಚದಾಂತ್ಯ ಬಹಳ ಮುಖ್ಯವಾಗಿರುವಂತಹದ್ದು .ಬುದ್ದರ ಪಂಚಶೀಲ ನಮ್ಮ ಜೀವನವನ್ನು ರೂಪಿಸುತ್ತದೆ. ಇಂತಹ ವೈಜ್ಞಾನಿಕ ಧಮ್ಮವನ್ನು ಕೊಟ್ಟವರು ಬುದ್ದರು. ಮಹಿಳೆಯರಿಗೆ ಸ್ಥಾನಮಾನವನ್ನು ಕೊಟ್ಟ ಧರ್ಮ ಬುದ್ದ ಧಮ್ಮವಾಗಿದೆ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಹಿಂದೂಕೊಡಬಿಲ್ಲ ಮುಖಾಂತರ ಎಲ್ಲ ಮಹಿಳೆಯರಿಗೆ ಅವರ ಹಕ್ಕು ಬಾಧ್ಯತೆಯನ್ನು ಒದಗಿಸಿದರು. ಒಬ್ಬ ಹೆಣ್ಣು ಮಗಳು ಇಂದು ಸ್ವತಂತ್ರವಾಗಿ ತನ್ನ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದ್ದು ಅದು ನಮ್ಮ ಸಂವಿಧಾನದಿಂದ. ಎಲ್ಲಿ ಪ್ರೀತಿ ಇರುತ್ತದೆಯೊ ಅಲ್ಲಿ ಬುದ್ದನಿರುತ್ತಾರೆ. ಎಲ್ಲಿ ಮಮತೆ ಇದೆಯೊ ಅಲ್ಲಿ ಬುದ್ದನ ಕರುಣಿ ಇದೆ.ಇಂತಹ ಬದುಕು ಕಟ್ಟಿಕೊಳ್ಳಲು ಬುದ್ದಪ್ರಜ್ಞೆ ಇಂದು ಅಗತ್ಯವಾಗಿದೆ ಎಂದು ಎಸ್.ಕೆ.ಮಹಾವಿದ್ಯಾಲಯ ತಾಳಿಕೋಟಿಯ ಸಹಾಯಕ ಪ್ರಾಧ್ಯಾಪಕರಾದ ಡಾ.ಸುಜಾತಾ.ಚಲವಾದಿ ಅವರು ಮುಖ್ಯ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮದ ಸಾನಿದ್ಯವನ್ನು ವಹಿಸಿದ ಪೂಜ್ಯಭದಂತ ಪ್ರಜ್ಞಾಶೀಲ ಥೇರೋ ಅವರು ಆಶಿರ್ವಚನವನ್ನು ನೀಡಿದರು.
ಪೂಜ್ಯ ಭದಂತ ಭೊಧಿದತ್ತ ಥೇರೋ ಹಾಗೂ ಪೂಜ್ಯ ಬಿಕ್ಕುಣಿ ಸುಮನಾ ಥೇರಿ ಅವರು ಬುದ್ದರ ತತ್ವಗಳ ಕುರಿತು ಮಾತನಾಡಿದರು. ಸಂಘಟನಾ ಕಾರ್ಯದರ್ಶಿಗಳಾದ ಬಸವರಾಜ ಹೋಳ್ಕರ ಅವರು ಪ್ರಾಸ್ಥಾವಿಕವಾಗಿ ಮಾತನಾಡಿದರು.ಅಖಿಲ ಭಾರತ ಬೌದ್ದ ವೇದಿಕೆ ಕರ್ನಾಟಕದ ಸಂಯೊಜಕರಾದ ಬುದ್ದಘೋಷ್ ದೇವೆಂದ್ರ ಹೆಗ್ಗಡೆ ಅವರು ವರ್ಷಾವಾಸ ಕುರಿತು ಉಪನ್ಯಾಸವನ್ನು ನೀಡಿದರು. ಭಾರತೀಯ ಬೌದ್ದ ಮಹಾಸಭಾದ ಅಧ್ಯಕ್ಷರಾದ ಬಸವರಾಜ ಚಲವಾದಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಂಘದಾನವನ್ನು ಉಪಾಸಕರು ನೀಡಿದರು.ಸಂತೊಷ ಶಹಾಪೂರ ಕಾರ್ಯಕ್ರಮದ ನಿರೂಪಿಸಿದರು. ಅತಿಥಿಗಳನ್ನು ವೆಂಕಟೇಶ ವಗ್ಗೆನವರ ಸ್ವಾಗತಿಸಿ ಪುಪ್ಪಾರ್ಚನೆಯನ್ನು ಮಾಡಿದರು. ರೊಹಿತ ವಂದಿಸಿದರು ಹಾಗೇ ಮಹೇಶ ಕ್ಯಾತನವರ್, ಅಭಿಷೇಕ ಚರ್ಕವರ್ತಿ, ರೇಣುಕಾ.ಶಹಾಪೂರ,ಭಾರತಿ ಹೊಸಮನಿ ,ಭಾಗ್ಯಾ ಒಗ್ಗೆನವರ್ , ಸವಿತಾ ದೊಡಮನಿ, ಹಾಗೂ ಎಲ್ಲ ಉಪಾಸಕರು ಹಾಗೂ ಉಪಾಸಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ : ಡಾ. ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments