*ವಿಷಯ ವನಜವೃತ್ತ*
*ಚಿತ್ರ ಕವನ*
*ತಾಯಿ ಮರಿ ಹಕ್ಕಿಗಳು*
ಮರಿಗಳನು ಮಡಿಲಿನಲಿ ಬರಸೆಳೆದು ಕೊಂಡೇ
ಸುರಿಯುತಿಹ ಮಳೆಹನಿಯ ತಡೆಯುತಲಿ ತಾಯೀ
ಪಿರುತಿಯಲಿ ಗಿಳಿಮರಿಯ ಉದರದೊಳು ಮುಚ್ಚೀ
ಮರದ ಪೊಟರೆ ಯೊಳಗಿರಿಸುತ ಗುಟುಕು ನೀಡೀ
ಕರುಳ ಕುಡಿಯ ನೆನೆಯಬಿಡದೆ ಬಳಸಿ ಹಕ್ಕೀ
ಸುರಿವಮಳೆ ಹನಿ ಮರಿಗಳಿಗೆ ಸಿಡಿಯದಂತೇ.
ಗರಿಯಹರಡಿ ಹೊದಿಕೆಹೊದಿಸಿ ಬಿಸಿಯನೀಡೀ
ಪೊರೆಯುತ ಖುಷಿಯಪಡುತ ಸುಖದೊಳಗೆ ತೇಲೀ
ಅರಗಿಣಿಯು ಮರಿಗಳನು ಮಮತೆಯಲಿ ಸಾಕೀ
ಮರಗಿಡವೆ ಮನೆಯವಕೆ ಕುಟಿರವನು ಕಟ್ಟೀ
ಸರಸದಲಿ ನಲಿಯುತಲಿ ಗುಟುಕುಗಳ ನೀಡೀ
ಮರದಮಡಿಲು ಜಗವದು ಖಗಗಳಿಗೆ ನೋಡೀ
*ಸ್ನೇಹದ ಸಂಕೋಲೆ ಪುಷ್ಪ* 🌹🌹
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments