* ಮನ ಸೆಳೆದ ಬಾಲೆ*

 *ಮನ ಸೆಳೆದ ಬಾಲೆ*



ಏನು ಅಂದವೇ ನಿನ್ನ ಮುಖಕಮಲವು

ಮೈ ಮಾಟದಾ ಆ ಸೌಂದರ್ಯವೋ..

ಸ್ವರ್ಗದಿಂದಿಳಿದ  ಅಪ್ಸರೆನೀನೆಯೋ 

ಧರೆಗಿಳಿದ ರಂಭೆಯೋ ಮೇನಕೆಯೋ


ಹವಳದಂತಥ ತುಟಿಗಳು ನಿನದು

ಅಪ್ಪಿ  ಮುತ್ತಿಡುವ ಬಯಕೆಯು ನನದು

ನಡೆಯುವಾಗ ಶಿಲಾ ಬಾಲಿಕೆ ನೀನು

ನಡುವ ಬಳಸಿ ನಾ ನಿಲ್ಲಲೇನು 


ಹೃದಯವೀಣೆಯ ನುಡಿಸೋಣವೇ 

ಜೊತೆಸೇರಿ ಹೊಸರಾಗ ಹಾಡೋಣವೇ

ಚಂದನದ  ಬೊಂಬೆಯೇ ನಾ ಸೋತೆ ನಿನಗೆ

ಅನುರಾಗ ಬೆರೆತಾಗ ಆನಂದವೇ


ಪ್ರಥಮ ಮಿಲನಕೆ ಸ್ವಾಗತ ನೀಡುವೆಯಾ

ಮಧು ಹಿರಲು ಅನುಮತಿ ನೀಡುವೆಯಾ

ನಾಳೆಯೆನ್ನದೆ  ಪ್ರೇಮಾಮೃತ ಹರಿಸೆಯಾ

ಪ್ರೇಯಸಿಯೇ ಒಮ್ಮೆ ದಯೆತೋರೆಯಾ?


*ಅಶೋಕ ಬೇಳಂಜೆ*

Image Description

Post a Comment

0 Comments