ಶೀರ್ಷಿಕೆ: *ಸವಿ ಮಾತು*

 🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏


ಶೀರ್ಷಿಕೆ: *ಸವಿ ಮಾತು*



ಬಸವಣ್ಣನವರ ವಚನದಂತೆ 

ಮಾತು ಮುತ್ತಿನ ಹಾರದಂತೆ 

ಮಾಣಿಕ್ಯದ ಹೊಳಪಿನಂತೆ 

ಇರಬೇಕೆಂದು ಹೇಳಿರುವರು 


ಇನಿಯನಾಡುವ ನುಡಿಯು 

ಸವಿಜೇನು ಸವಿದಂತೆಯು 

ಮಕರಂದ ಹೀರಿದಂತೆಯು

ಮನ ರೋಮಾಂಚನ ವಾದಂತೆಯು 


ನಿನ್ನ ನೋಡಿದಂದಿನಿಂದಲೇ 

ಮನ ನನ್ನಲ್ಲೇ ಇರದಾಗಲೇ 

ದೂರ ತಳ್ಳಿದರು ಅಪ್ಪುವಂತಲೇ 

ಇರಬೇಕೆಂದು ಅನಿಸಿದಾಗಲೇ 


ಅದು ಏನು ಮೋಡಿ ಮಾಡಿದೆ 

ಮನ ನಿನ್ನ ಸುತ್ತಲೇ ಗಿರಕಿ ಹೊಡೆದಿದೆ 

ಯಾವ ಜನ್ಮದ ಬಂಧ ನನ್ನ ನಿನ್ನ ಸೇರಿಸಿದೆ 

ನಾ ಮಾಡಿದ ಪುಣ್ಯವೋ ಏನೋ ನೀ ನನಗೊಲಿದೆ 


✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments