*ಮುಂಜಾವಿನ ಮಾತು*
ನೆತ್ತಿಯಮೇಲಿಟ್ಟು ದೃಷ್ಟಿ
ಗತ್ತು ತನದೆಂದು ಮೆರೆದರೆ
ಬೆತ್ತದೇಟೀಯದೇ ಕಾಲ
ಸುತ್ತಮುತ್ತ ನೋಡಿದರೊಮ್ಮೆ
ಬತ್ತದ ಕಣ್ಣೀರ ಹೊಳೆಯಲಿ
ಕತ್ತಲಲ್ಲೇ ಬದುಕು ಕಳೆದ
ಚಿತ್ತಗಳೆಷ್ಟೋ ಹದಗೊಳಿಸಿ
ಆತ್ಮಬಲದ ಧ್ಯಾನ ಬೀಜ
ಬಿತ್ತಿಬಿಡು ಮನವೇ
*ಶುಭೋದಯ*
*ರತ್ನಾಬಡವನಹಳ್ಳಿ*
0 Comments