* ಬೆರಗು ಮೂಡಿಸಿದ ನಗು*

 ಬೆರಗು ಮೂಡಿಸಿದ ನಗು



ಅವಳ ಈ ನಗು

ಮನೆ ತುಂಬ ಹೂ


ಅವಳ ಆ ನೋಟ 

ನನಗೊಂದು ಬೆರಗು


ನೋಟ ಹಾಡುವುದು 

ನಗು ಅರಳುವುದು 


ನೋಟವರಳಿ ಬೆರಗು 

ಮೈದುಂಬಿ ಅರಳುವುದು ಹೂ


ನೋಟದಲಿ ನಗು ಬೆರೆತು 

ಬಣ್ಣಗಳು ಹಲವಾರು 


ಅವನಲ್ಲಿ ಕಾಮನಬಿಲ್ಲು ಮೂಡಿರಲು 

ಅವಳ ಕಣ್ಣಲ್ಲಿ ಮಿನುಗಿವೆ ದೀಪಗಳು


ಉದಂತ ಶಿವಕುಮಾರ್ 

ಕವಿ ಮತ್ತು ಲೇಖಕ 

ಬೆಂಗಳೂರು -560056

Image Description

Post a Comment

0 Comments