💞 ನಾಡ ಹಬ್ಬ ದಸರಾ 💞

 ಶೀರ್ಷಿಕೆ 

💞 ನಾಡ ಹಬ್ಬ ದಸರಾ 💞



ಸಾಂಸ್ಕೃತಿಕ ನಗರಿಯಲ್ಲಿ ಜೋರು

ಜಂಬೂ ಸವಾರಿ!

ನಾಡಿನೆಲ್ಲೆಡೆ ಜನರ ತನ್ನತ್ತ ಸೆಳೆಯುವ

ಶಕ್ತಿಯೊಂದು ಪರಿ!!


ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮದಲಿ ಮಿಂದೇಳುತ್ತಿದೆ ಅರಮನೆ ನಗರ!

ಮದುವಣಗಿತ್ತಿಯಂತೆ ಶೃಂಗರಿಸಿದೆ ಮೈಸೂರ ಅರಮನೆಯ ಅಲಂಕಾರ!!


ಅಂಬಾರಿ ಹೊರುವ ಆನೆಗಳಿಗೆ ಸುಂದರಲಂಕಾರ

ಎಲ್ಲೆಲ್ಲೂ ದಸರಾ ಸಂಭ್ರಮ ಸಡಗರ!

ಐವತ್ತೊಂದು ಸ್ತಬ್ಧ ಚಿತ್ರಗಳು ತಂದಿವೆ ಮೆರಗು

ನಾಡಿನೆಲ್ಲೆಡೆ ತಾಯಿ ಚಾಮುಂಡೇಶ್ವರಿ

ಮೆರವಣಿಗೆ ಕಣ್ತುಂಬಿಕೊಳ್ಳುವುದೇ ಸೊಬಗು!!


ಮೈಸೂರು ಜನತೆ ಆರಾಧಿಸುವ ಜಗನ್ಮಾತೆ!

ಎಲ್ಲರ ಕಷ್ಟ ಸಂಕಷ್ಟಗಳ ಸಂಹರಿಸುವ

ಶಕ್ತಿಯೊಂದಿದ ನಾಡದೇವತೆ!!


ಅಭಿಮನ್ಯು ಹೊತ್ತು ಸಾಗುವ ಚಿನ್ನದಂಬಾರಿಯಲಿ

ವಿಜೃಂಭಿಸುವ ವಿರಾಜಮಾತೆಗೆ ಶುಭಘಳಿಗೆ!

ರಾಜ ಮಾರ್ಗದಿ ಹೊರಟಿತು ಅರಮನೆಯಿಂದ ಬನ್ನಿ ಮಂಟಪವರೆಗೆ

ಜಂಬೂ ಸವಾರಿಯ ಮೆರವಣಿಗೆ!!


ಏಳುನೂರ ಐವತ್ತು ಕೆಜಿ 

ಚಿನ್ನದಂಬಾರಿ ಮೇಲ್ಕುಳಿತು ವಿರಾಜಮಾನವಾಗಿ ಸಂಚರಿಸಿದ ವಿರಾಜಮಾತೆ!

ದಸರಾ ವೈಭವದ ಉತ್ಸವವ ಯಶಸ್ವಿಗೊಳಿಸಿದ ನಾಡಜನತೆ!!


ದಸರಾವೆಂದರೆ  ಮೈಸೂರಿಗೊಂದು 

ಹಿರಿಮೆ!

ಸಾಹಿತ್ಯ ಸಂಸ್ಕೃತಿ ತಂದು ಕೊಡುತಿದೆ 

ರಂಗಿನ ಗರಿಮೆ!!


ನೋಡು ಬಾರ ನಮ್ಮೂರ ದಸರ

ತಾಯಿ ಚಾಮುಂಡೇಶ್ವರಿ ಆಶಿರ್ವಾದ ಪಡೆಯಲು ಜನಸಾಗರ!

ಯಶಸ್ವಿಯಾಗಿ ನಡೆಯಿತು ನಾಲ್ಕು ನೂರ ಹದಿನೈದನೆ ದಸರ

ಅರ್ಜುನನಿಲ್ಲದೆ ದಸರಾ ನಡೆದಿರುವುದು ಅತ್ಯಂತ ಬೇಸರ!! 


ಅಂಜನ್ ಎನ್ 

ದೊಡ್ಡಬಳ್ಳಾಪುರ

Image Description

Post a Comment

0 Comments