* ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಡಿಡಿಪಿಐ ಸೀತಾರಾಮು ಅವರಿಗೆ ಸನ್ಮಾನ *

 ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಡಿಡಿಪಿಐ ಸೀತಾರಾಮು ಅವರಿಗೆ ಸನ್ಮಾನ 



ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲೇ ಶೈಕ್ಷಣಿಕ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಡಿಡಿಪಿಐ 

ಆಗಿ ಹೊಸದಾಗಿ ಆಗಮಿಸಿರುವ ಸೀತಾರಾಮು ಅವರಿಗೆ ಶಿಕ್ಷಕರಿಂದ ಪ್ರೀತಿಯ ತವರಿನ ಸನ್ಮಾನ.


 ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ತುಮಕೂರು, ಕೋಲಾರ ಭಾಗದ 60ಕ್ಕೂ ಹೆಚ್ಚು ಶಿಕ್ಷಕರು ಕಳೆದ ಒಂದು ವರ್ಷದಲ್ಲಿ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯ ಭಾಗದ ಹುಕ್ಕೇರಿ, ಅಥಣಿ, ರಾಯಭಾಗ, ಗೋಕಾಕ, ನಿಪ್ಪಾಣಿ, ಚಿಕ್ಕೋಡಿ ಭಾಗದಲ್ಲಿ ಪದವೀಧರ ಶಿಕ್ಷಕರಾಗಿ ನೇಮಕಗೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ  ಶೈಕ್ಷಣಿಕ ಜಿಲ್ಲೆಗೆ ಹೊಸದಾಗಿ ಆಗಮಿಸಿರುವ ಮೈಸೂರು ಭಾಗದ ಡಿಡಿಪಿಐ ಅವರಿಗೆ ತವರಿನ ಸನ್ಮಾನ ಮಾಡಿ ಆತ್ಮೀಯವಾಗಿ ಅಭಿನಂದಿಸಿದರು.


ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಿಡಿಪಿಐ ಸೀತಾರಾಮ ಅವರು ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಯಲ್ಲಿ ಶಿಕ್ಷಣದಲ್ಲಿ  ಮತ್ತಷ್ಟು ಶೈಕ್ಷಣಿಕ ಕ್ರಾಂತಿಯನ್ನು ಉಂಟುಮಾಡಬೇಕಾಗಿದೆ. ಅದು ಯುವ ಶಿಕ್ಷಕರಾದ ನಿಮ್ಮಿಂದ ನಿಮ್ಮ ಶಾಲೆಗಳಲ್ಲಿ ಉತ್ತಮವಾದಂತ ಬೋಧನೆಯನ್ನು ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ವೈಚಾರಿಕ ಚಿಂತನೆ ಶೈಕ್ಷಣಿಕ ಕ್ರಾಂತಿಯನ್ನು ಮೂಡಿಸಬೇಕಾದ ಅಗತ್ಯವನ್ನು ತಿಳಿಸಿದರು. 

ಜೊತೆಗೆ ನೂತನ ಶಿಕ್ಷಕರಿಗೆ ಆರೋಗ್ಯ ಮತ್ತು ಶಿಕ್ಷಣದ ಮಹತ್ವದೊಂದಿಗೆ ಸಂವಿಧಾನದ ಆಶಯವನ್ನು ಔಪಚಾರಿಕವಾಗಿ ಮಾತನಾಡುತ್ತಾ ತಿಳಿಸಿದರು.


ಈ ಸಂದರ್ಭದಲ್ಲಿ, ಪದವೀಧರ ಶಿಕ್ಷಕರಾದ ರೇವಣ್ಣ ,ಬೆಳಕು ಹರೀಶ್, ಅಭಿಷೇಕ್ ಕೆ ಆರ್, ಜಿತೇಂದ್ರ, ಮಾದಪ್ಪ ,ಪ್ರದೀಪ್ ಕುಮಾರ್ ,ನಾಗರಾಜ್ , ಪ್ರವೀಣ ಯೋಗೇಶ್, ಆನಂದ, ಕೃಷ್ಣೇಗೌಡ 

ಪರಮೇಶ್ ಮತ್ತಿತರ ಉಪಸ್ಥಿತರಿದ್ದರು.


ವರದಿ : ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments