*ಸಂಗೀತಕ್ಕೆ ಲೋಕ ಗೆಲ್ಲುವ ಶಕ್ತಿ ಇದೆ:*
*ಪ್ರಾ. ಟಿ ಎಸ್ ವಂಟಗೂಡಿ*
ರಾಯಬಾಗ: ತಾಲ್ಲೂಕಿನ ಪ್ರತಿಷ್ಠಿತ ಹಿಡಕಲ್ ಗ್ರಾಮದ ವಸಂತರಾವ ಪಾಟೀಲ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಇತ್ತೀಚಿಗೆ "ಕಾವ್ಯ ಗಾಯನ ಸ್ಪರ್ಧೆ" ಏರ್ಪಡಿಸಲಾಗಿತ್ತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಜಾನಪದ ಸಾಹಿತಿ ಪ್ರಾ ಟಿ ಎಸ್ ಒಂಟಗೂಡಿ ಮಾತನಾಡಿ "ಸಾಹಿತ್ಯ ಮತ್ತು ಸಂಗೀತ ಸರಸ್ವತಿ ದೇವಿಯ ಎರಡು ನಯನಗಳಿದ್ದಂತೆ!! ರಸಾನುಭವದ ಸುಂದರವಾದ ಅಭಿವ್ಯಕ್ತಿಯೇ ಸಾಹಿತ್ಯ ನೊಂದ ಬೆಂದ ಮನಸ್ಸುಗಳಿಗೆ ಆನಂದವನ್ನು ನೀಡುವ ದಿವ್ಯ ಔಷಧವೇ ಸಂಗೀತ. ಸಂಗೀತಕ್ಕೆ ತಲೆದೂಗಲಾರದ ಮನುಷ್ಯರೇ ಇಲ್ಲ ಸಂಗೀತಕ್ಕೆ ಲೋಕ ಗೆಲ್ಲುವ ಶಕ್ತಿ ಇದೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕಾವ್ಯ ಗಾಯನದಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಗೀತ ರಸಿಕರಿಗೆ ರಸದೌತಣ ನೀಡಬೇಕೆಂದರು. ಹಲವಾರು ವಿದ್ಯಾರ್ಥಿಗಳು ಕಾವ್ಯ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಗಣ್ಯರಿಂದ ಬಹುಮಾನ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ನಿರ್ಣಾಯಕರಾಗಿ ಖಾನಟ್ಟಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಎಲ್ ಎಸ್ ಪಾಟೀಲರವರು ಸನ್ಮಾನ ಸ್ವೀಕರಿಸಿ ಮಾತನಾಡಿ, "ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ವಿನಯ ಹಾಗೂ ಆದರ್ಶತೆಯನ್ನು ಬೆಳೆಸಿಕೊಂಡು ಜಗತ್ತು ಬೆಳಗುವ ಜ್ಯೋತಿಗಳಾಗಬೇಕೆಂದರು. ಪ್ರೊ ಎಸ್ ವಿ ವಗ್ಗಾ, ಸುಲೋಚನಾ ಹುಕ್ಕೇರಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಕಾವ್ಯ ಗಾಯನ ಸ್ಪರ್ಧೆಯಲ್ಲಿ ಪೂಜಾ ಗುಬಚನ್ನವರ ಪ್ರಥಮ, ಸಂಗೀತಾ ಬಾವಚಿ ದ್ವಿತೀಯ ಸ್ಥಾನ, ಸರಸ್ವತಿ ಸಣ್ಣಕ್ಕಿನವರ ತೃತೀಯ ಸ್ಥಾನ ಗಳಿಸಿ ಗಣ್ಯರಿಂದ ಬಹುಮಾನ ಪಡೆದುಕೊಂಡರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ ಆರ್ ಟಿ ಮಾಳಿ ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಪ್ರಭು ಗೊಳಸಂಗಿ, ಮುತ್ತು ಕರಿಗಾರ, ಸಂಜೀವ ಇಮ್ಮಡಿ ಶಿವಾನಂದ ಪಾರ್ಥನಳ್ಳಿ,ಸಂತೋಷ ಪಾಟೀಲ, ಲೋಕೇಶ ಪಾಟೀಲ ಸೇರಿದಂತೆ ವಿದ್ಯಾರ್ಥಿ ವೃಂದ ಹಾಗೂ ಉಪನ್ಯಾಸಕ ವೃಂದ ಹಾಜರಿದ್ದರು. ದಾನೇಶ ತಳವಾರ ಸ್ವಾಗತಿಸಿದರು. ಚೈತ್ರಾ ಹೊಸಟ್ಟಿ ನಿರೂಪಿಸಿದರು. ಸಂಗೀತಾ ಭಾವಚಿ ವಂದಿಸಿದರು.
*ವರದಿ:ಡಾ. ಜಯವೀರ ಎ. ಕೆ.*
*ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments