* ಕ.ರಾ ವೇ. ಚಿಕ್ಕೋಡಿ ತಾಲೂಕಾ ಅಧ್ಯಕ್ಷರಾಗಿ ಸಂಜು ಬಡಿಗೇರ ನೇಮಕ *

 ಕ.ರಾ ವೇ. ಚಿಕ್ಕೋಡಿ ತಾಲೂಕಾ ಅಧ್ಯಕ್ಷರಾಗಿ ಸಂಜು ಬಡಿಗೇರ ನೇಮಕ




ಚಿಕ್ಕೋಡಿ: ಕಳೆದ ಸುಮಾರು ಇಪ್ಪತೈದು ವರ್ಷಗಳಿಂದ, ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯ ಉಳಿವಿಗಾಗಿ, ಚಿಕ್ಕೋಡಿ ಭಾಗದಲ್ಲಿ ಸತತ ಹೋರಾಟ ಮಾಡುತ್ತಾ ಬಂದಿರುವ ಸಂಜು ಬಡಿಗೇರ ಅವರು  ಕಳೆದ ಐದು ವರ್ಷಗಳಿಂದ ಕರವೇಯ ಜಿಲ್ಲಾ ಸಂಚಾಲಕರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. 

 ಕೇರೂರ ಗ್ರಾಮದ ಯುವಕ ಸಂಜು ಬಡಿಗೇರ ಇವರ ಜನಪರ ಹೋರಾಟ ಮತ್ತು ನಾಡು, ನುಡಿ ,ನೆಲ, ಜಲ ಭಾಷೆಯ ಪರವಾಗಿ ಮಾಡುವ ಹೋರಾಟಗಳನ್ನು  ಗುರುತಿಸಿ, ಕರವೇ ಬೆಳಗಾವಿ ಜಿಲ್ಲಾಧ್ಯಕ್ಷರಾದ ದೀಪಕ  ಗುಡಗನಟ್ಟಿ ಇವರ ನಿರ್ದೇಶನದ ಮೇರೆಗೆ, ಕರವೇ ರಾಜ್ಯಾಧ್ಯಕ್ಷರಾದ ಟಿ. ಎ‌ ನಾರಾಯಣ ಗೌಡರು, ಸಂಜು ಬಡಿಗೇರ ಇವರನ್ನು, ಚಿಕ್ಕೋಡಿ ತಾಲೂಕಾ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ನೀಡಿದ್ದಾರೆ. ಇವರಿಗೆ ಜನಪರ ಹೋರಾಟಗಾರ ಚಂದ್ರಕಾಂತ ಹುಕ್ಕೇರಿ ಹಾಗೂ ಅಪಾರ ಹೋರಾಟದ ಸಂಗಡಿಗರು ಶುಭ ಹಾರೈಸಿದ್ದಾರೆ. 


ವರದಿ : ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments