🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏
ಶೀರ್ಷಿಕೆ: *ತವರು ಮನೆ*
ತಾನು ಹುಟ್ಟಿದ ನಂದ ಗೋಕುಲವು
ಎಲ್ಲರ ಪ್ರೀತಿ ಪಡೆದ ನಿಲಯವು
ರಕ್ತ ಸಂಭಂದ ಹಂಚಿಕೊಂಡ ನಂದನವು
ಹೆಣ್ಣಿಗೆ ತವರು ಮನೆ ಅಲ್ಲವೆ ಸ್ವರ್ಗವು
ಧಾರೆಯೆರೆದು ಕೊಟ್ಟ ಮೇಲೆ
ಲಕ್ಷ್ಮಿಯಾಗಿ ಕಳುಹಿಸಿದ ಮೇಲೆ
ಕರುಳ ಬಳ್ಳಿಯ ಕಡಿದು ಕೊಂಡ ಮೇಲೆ
ಅವರಿಗೆ ದುಃಖವು ಇರುವುದು ಒಂದೇ ಕಣ್ಣಿನಲ್ಲೇ
ಪತಿಯ ಮನೆ ಸುಖದ ಸುಪ್ಪತ್ತಿಗೆಯಾದರೂ
ಬೆಳ್ಳಿ ಬಂಗಾರವನ್ನು ತಂದು ಮಣ ಹೇರಿದರೂ
ಅಷ್ಟೈಶ್ವರ್ಯದಲ್ಲೇ ಮುಳುಗಿಸಿದರೂ
ಮನ ಎಲ್ಲೋ ಒಂದು ಕಡೆ ನೆನೆಯುತ್ತಲೇ ಇರುವುದು
ಅದೇ ಅಲ್ಲವೆ ನಮ್ಮ ಮಣ್ಣಿನ ಮಗಳಿಗೆ ಸೆಳೆತವದು
ಹಬ್ಬ ಹರಿದಿನಗಳಲ್ಲಿ ತವರಿಂದ ಕರೆಯೋಲೆ ಆಶಯವದು
ಅವರ ಕಷ್ಟ ಸುಖಕ್ಕೆ ಅವಳ ಮನ ಮಿಡಿಯುವುದು
ಎಂದೂ ಬಾಡದೆ ಹಸಿರಾಗಿರಲಿ ಎಂದು ಹರಸುವದು
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments