*ಕನ್ನಡದ ರಥ*
*ಕನ್ನಡದ ರಥ ಎಳೆಯುವುದೆನ್ನ ಪಥ*
*ಕನ್ನಡ ಗೇಯವ ಪಾಡುದೆನ್ನ ಶಪಥ*
*ಕನ್ನಡವೆ ಹಳೆಯದು ನೋಡು ತಥ್ಯ*
*ಕನ್ನಡಮ್ಮನಿಗಿಲ್ಲ ಭಾಷೆ ಹಂಗಿನ ಪಥ್ಯ......*
*ಪಚ್ಚ ಕನ್ನಡಮ್ಮನೆ ನನ್ನ ಅಚ್ಚುಮೆಚ್ಚು*
*ಕನ್ನಡದ ಮಡಿಲಾಡುವುದೆನೆಗೆ ಹುಚ್ಚು*
*ಕನ್ನಡದ ತಮಟೆ ಎಲ್ಲೆಡೆಯಲ್ಲೂ ತಟ್ಟು*
*ಕನ್ನಡದ ದೇವ ಸನ್ನಿಧಿಯನ್ನೇ ಮುಟ್ಟು.........*
*ಕನ್ನಡ ಒಡಲಲಿ ಜನಿತ ಜನಕೆ ನಮನ*
*ಕನ್ನಡ ನಂಬಲು ಕಷ್ಟವೆಲ್ಲ ಉಪಶಮನ*
*ಕನ್ನಡಾಮೃತ ಕುಡಿದ ಕುಡಿಗಳು ಚಿಗುರಲಿ*
*ಕನ್ನಡ ಶಾಸನದ ಸಾಲುಗಳೋ ಮೆರೆಯಲಿ.....*
*ಕನ್ನಡದ ಭಾಷೆಗಿಂತಲೂ ಇಲ್ಲ ಅಚ್ಚುಕಟ್ಟು*
*ಕನ್ನಡದ ಭಾಷೆಗೆಂದು ಇಲ್ಲವಲ್ಲ ಸಮಕಟ್ಟು*
*ಕನ್ನಡಾಂಬೆಯ ಕಂಪು ಇಂಪು ಅಜರಾಮರ*
*ಕನ್ನಡದ ಅಂಚೆಕಟ್ಟೆ ಓದವುದೆ ಮನೋಹರ......*
*ರೇಖಾ ವಿ ಕಂಪ್ಲಿ* ✍️
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments