ಚಿತ್ರಕ್ಕೊಂದು ಕವನ
*ಮುಳುಗುವ ಸೂರ್ಯದೇವ*
ನೀಲಿ ಆಕಾಶದಿ
ಬಣ್ಣ, ಬಣ್ಣದ
ಚಿತ್ತಾರ ಸುಂದರವಾಗಿ
ಬಿಡಿಸಿದವರಾರು..
ಶೋಧಿಸಕಾಗದ
ಮಹಾ ಸಾಗರದಿ
ಉಪ್ಪು ನೀರನು
ತುಂಬಿಸಿ ವಿಶಾಲವಾಗಿ
ಇಟ್ಟವರಾರು..
ಪೂರ್ವದಲಿ ಮೂಡಿ
ಪ್ರಶ್ಚಿಮದಲಿ ಮುಳುಗುವ
ಸೂರ್ಯದೇವನ
ನೋಡುವ ಭಾಗ್ಯ
ಕರುಣಿಸಿದವರಾರು..
ಕಡಲಕವಿ
ಶಿವಾನಂದ ಬಿ ಮೊಗೇರ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments