* ಮದುವೆ ಮಹಾತ್ಮೆ..!

 "ಸತೀಮಣಿಗಳ ಕಿಟಿಕಿಟಿ ಕುರಿತು, ಪತಿಯೆಂಬ ಪರಾಕ್ರಮಿಗೆ pity pity ಸೂಸುತ್ತಾ ಬರೆದ ಕವಿತೆ" - ಪೂರ್ತಿ ಓದಿ, ಮನಸಾರೆ ನಕ್ಕು ನವರಾತ್ರಿ ಬೊಂಬೆಗಳನ್ನು ಬೀಳ್ಕೋಡೋಣ. ಏನಂತೀರಾ..?? - ಕೇವಲ ನಗುವಿಗಾಗಿ ಈ ಹಾಸ್ಯಗವಿತೆ. - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.


ಇದು ಸ್ವಾನುಭವವೂ ಹೌದು, ಲೋಕಾನುಭವವೂ ಹೌದು. ಸುಖಸಂಸಾರಕ್ಕೆ ಸೂತ್ರವೂ ಹೌದು, ಪತಿ ಅನಿವಾರ್ಯವಾಗಿ ನಿರ್ವಹಿಸಲೇಬೇಕಾದ ಪಾತ್ರವೂ ಹೌದು. ಹೌದಲ್ವಾ..?? - ಹ್ಹ..ಹ್ಹ..ಹ್ಹಾ.. 


ಮದುವೆ ಮಹಾತ್ಮೆ..!



ವರ್ಷಕೊಮ್ಮೆ ನವರಾತ್ರಿಯಂದು 

ಪೆಟ್ಟಿಗೆಯಿಂದಾಚೆಗೆ ಬರುವ 

ಗೊಂಬೆಗಳಿಗೆ ಸಂಭ್ರಮ-ಸಡಗರ.! 

ನನ್ನ ಕಂಡರೆ ಅದೇಕೋ ಕನಿಕರ..!! 


ನಿತ್ಯ ನನ್ನ ಹಂಗಿಸಿ ಅಣಕಿಸುತ್ತವೆ 

ಪರಸ್ಪರ ತಮ್ಮಲ್ಲೇ ಪಿಸುಗುಟ್ಟುತ್ತವೆ.. 

“ನಾವೋ ಮಾತುಬಾರದ ಗೊಂಬೆ 

ಇವನೊಬ್ಬ ಮಾತು ಬಂದರೂ.. 

ಆಡದ ಬಾಯಿಯೇ ಬಿಡದ 

ಮೌನದ ಜೀವಂತ ಮೂಕಗೊಂಬೆ!” 


ಅವುಗಳ ಮಾತು ಕೇಳಿಸಿದರೂ 

ಕೇಳಿಸದಂತೆ ನಟಿಸುತ್ತೇನೆ 

ನನ್ನಲ್ಲೇ ನಕ್ಕು ಸುಮ್ಮನಾಗುತ್ತೇನೆ! 


“ಬೊಂಬೆಗಳಿಗೇನು ಗೊತ್ತು..? 

ಲೋಕದಾ ಮದುವೆ-ಮಹಾತ್ಮೆ! 

ಮದುವೆಯ ನಂತರ ಇಲ್ಲಿ 

ಪ್ರತಿ ಹೆಣ್ಣೂ ಮಾತನಾಡುವುದ 

ನಿಲ್ಲಿಸಲು ಮರೆಯುತ್ತಾಳೆ..!! 

ಪ್ರತಿಗಂಡೂ ಮಾತನಾಡುವುದನ್ನೇ 

ಮರೆಯುತ್ತಾನೆ ಎಂದು..!!!!!” 

   

 ಎ.ಎನ್.ರಮೇಶ್. ಗುಬ್ಬಿ

Image Description

Post a Comment

0 Comments