*ಗಝಲ್*
ಕಣ್ಣಸನ್ನೆಯಲೊಂದು ಕವಿತೆ
ಬರೆಯಲೇ ಸಖಿ
ಎನ್ನ ಕಾವ್ಯಬನದಲರಳುವ ಹೂವ ನಿನಗೆ
ಅರ್ಪಿಸಲೇ ಸಖಿ
ನಿನ್ನ ಹೃದಯದ ಪುಟ ಸದಾ ತೆರೆದಿಡು
ಪ್ರೇಮಗೀತೆ ಪ್ರಕಟಿಸುವೆ
ಮಲ್ಲಿಗೆಯಂತ ಪದಪುಂಜದ ಮಾಲೆಯ
ಎದೆಗೊತ್ತಿಸಲೇ ಸಖಿ
ಶಬ್ದಗಳ ರಾಶಿಯೇ ಸೌಂದರ್ಯದಲಿದೆ
ಕವನ ರಚನೆಗೆ
ಸಹಕಾರದ ಹಸ್ತವಿರೆ ಎದೆಯಾಳದಿ
ಮುದ್ರಿಸಿ ಬಿಡಲೇ ಸಖಿ
ಮೊಗವರಳಿಸಿ ಒಲವಿನ ಸಾಲುಗಳನು ಸದಾ
ಗಮನಿಸಿ ಓದುತಿರು
ಕವಿಭಾವದಲೊಂದಾಗಿಸಿ ಬಹು ಹಿಗ್ಗಲಿ ಜೊತೆಸೇರಿ
ಹಾಡಲೇ ಸಖಿ
ಅಶೋಕನ ಲೇಖನಿಗಿದೆಯಲ್ಲವೇ ಇರಿಯುತ
ಪ್ರೀತಿ ಗೆಲ್ಲೊ ಶಕ್ತಿ
ನನ್ನವಳ ತಣಿಸಿ ನವಿಲಂತೆ ಕುಣಿಸೊ ಬಲವಿದೆಯೇ
ಅಕ್ಷರದಲೇ ಸಖಿ
*ಅಶೋಕ ಬೇಳಂಜೆ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments