ಚಿತ್ರಕ್ಕೊಂದು ಬರಹ
ಶೀರ್ಷಿಕೆ : " ನೀನಿಲ್ಲದೆ "
ನನ್ನದೆಯಲಿ
ಅಳಿಸಲಾರದ ಗುರುತು ಕಣೆ
ಹೃದಯ ಕಡಲಲ್ಲಿ
ಮುಗಿಯದ ಅಲೆಗಳು ಕಣೆ
ನೀನು ನನಗೆ
ನೀನು ಕೇಳದೆ ಬಂದದ್ದೇಕೆ
ನನಗೆ ಹೇಳದೆ ಹೋದದ್ದೇಕೆ
ನೀನು ಕೊಂಡು ಹೋದದ್ದೇನು
ನನ್ನಲಿ ಬಿಟ್ಟು ಹೋದದ್ದೇನು
ನೀನು ಪಡೆದದ್ದೇನು
ನಾನು ಕಳೆದುಕೊಂಡದ್ದೇನು
ನನ್ನಲಿ ಉಳಿದದ್ದೆಲ್ಲವು
ಬರೇ ನೆನಪುಗಳೆ ಕಣೆ
ಕೊಲ್ಲುತ್ತಿದೆ ಪ್ರತಿಕ್ಷಣ
ಬಾಯ್ತೆರೆದು ಹೇಳಲಾಗದ
ವಿರಹ ವೇದನೆ
ಬದುಕಿರಲಿ ಹೇಗೆ ಹೇಳು
ನೀನಿಲ್ಲದೆ ನಾನು
✍️…ನಿಮ್ಮವನೆ..ರಾಜ್❣️
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments