* ಸೀರಿಯಲ್ ಗಳ ಭೂತ ಬಡಿದವರಿಗೆ ವಾಲ್ಮೀಕಿ ರಾಮಾಯಣದ ತಾಯತ ಕಟ್ಟಿದರೆ ಹೊರಟು ಹೋಗುತ್ತದೆ:* *ಪ್ರೊ ಟಿ ಎಸ್ ವಂಟಗೂಡಿ*

 *ಸೀರಿಯಲ್ ಗಳ ಭೂತ ಬಡಿದವರಿಗೆ ವಾಲ್ಮೀಕಿ ರಾಮಾಯಣದ ತಾಯತ ಕಟ್ಟಿದರೆ ಹೊರಟು ಹೋಗುತ್ತದೆ:* 

*ಪ್ರೊ ಟಿ ಎಸ್ ವಂಟಗೂಡಿ* 



  ರಾಯಬಾಗ: ತಾಲ್ಲೂಕಿನ ಹಿಡಕಲ್ ಗ್ರಾಮದ ಪ್ರತಿಷ್ಠಿತ ವಸಂತರಾವ ಪಾಟೀಲ ಸಂಯುಕ್ತ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಸಮಾರಂಭ ನೆರವೇರಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಬಾಗೆನಾಡಿನ ಜನಾನುರಾಗಿ ಸಾಹಿತಿ ಪ್ರೊ ಟಿ ಎಸ್ ವಂಟಗೂಡಿ ಮಾತನಾಡಿ, ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮತ್ತು ವ್ಯಾಸ ಮುನಿಗಳ ಮಹಾಭಾರತ ವಿಶ್ವದ ಎರಡು ಕಣ್ಣುಗಳಿದ್ದಂತೆ ರಾಮಾಯಣದಲ್ಲಿ ಬರುವ ಹನುಮಂತ, ರಾಮ, ಲಕ್ಷ್ಮಣ, ಸೀತೆ ಮುಂತಾದವರ ಪಾತ್ರಗಳು ಇಂದಿಗೂ ಆದರ್ಶವಾಗಿವೆ. ಕಂಪ್ಯೂಟರ್ ಟಿವಿ ಮೊಬೈಲ್ ಸೀರಿಯಲಗಳ ಹಾವಳಿಯಲ್ಲಿ ರಾಮಾಯಣದಲ್ಲಿ ಬರುವ ಆದರ್ಶ ತತ್ವಗಳು ಇಂದು ನಶಿಸುತ್ತಿವೆ. "ಸೀರಿಯಲಗಳ ಭೂತ ಬಡಿದವರಿಗೆ ವಾಲ್ಮೀಕಿ ರಾಮಾಯಣದ ತಾಯತ ಕಟ್ಟಿದರೆ ಇವುಗಳ ಭೂತ ಹೊರಟು ಹೋಗುತ್ತದೆ." ಎಂದು ಮಾರ್ಮಿಕವಾಗಿ ನುಡಿದರು. ರಾಮಾಯಣವನ್ನು ಪಾರಾಯಣ ಮಾಡಿದವರಿಗೂ ರಾಮಾಯಣದ ರಸಾನಂದವನ್ನು ಅನುಭವಿಸಿದವರಿಗೂ ಪುಣ್ಯ ಲಭಿಸುತ್ತದೆ. ರಾಮಾಯಣದ ಆದರ್ಶ ತತ್ವಗಳು ವಿಶ್ವದ ಜನತೆಗೆ ದಾರಿ ದೀಪವಾಗಬೇಕೆಂದರು.  ಸಮಾರಂಭದ ಘನ ಅಧ್ಯಕ್ಷತೆಯನ್ನು ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಆರ್ ಎಸ್ ತಳವಾರ ವಹಿಸಿಕೊಂಡಿದ್ದರು. ವೇದಿಕೆಯ ಮೇಲೆ ಉಪ ಪ್ರಾಚಾರ್ಯ ಜಿನೇಂದ್ರ ನೀಲಜಗಿ ಆರ್ ಎಂ ಶಿನಾಳ, ಶ್ರೀಮತಿ ಮಂಗಳಾ ಕಾಮಕರ, ಲೋಕೇಶ ಪಾಟೀಲ, ಸಂಜೀವ ಇಮ್ಮಡಿ, ಪ್ರಭು ಗೊಳಸಂಗಿ, ಸಂತೋಷ ಪಾಟೀಲ, ಮಾಯಪ್ಪ ಶಿರಡೋಣಿ, ಬಸವರಾಜ ಪೂಜಾರಿ ಸೇರಿದಂತೆ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳ ವೃಂದ ಹಾಜರಿದ್ದರು.  ಚೈತ್ರಾ ಹೊಸಟ್ಟಿ ಸ್ವಾಗತಿಸಿದರು. ನೀಲಮ್ಮಾ ಹೊಸೂರ ನಿರೂಪಿಸಿದರು. ಸರಸ್ವತಿ ಸಣ್ಣಕ್ಕಿನವರ ವಂದಿಸಿದರು.


*ವರದಿ:ಡಾ. ಜಯವೀರ ಎ.ಕೆ.*

    *ಖೇಮಲಾಪುರ*

Image Description

Post a Comment

0 Comments