"ಗಾಂಧಿ ಗಿರಿ"

 ***************************

              "ಗಾಂಧಿ ಗಿರಿ"


***************************

ಇಂದು ಗಾಂಧಿಯವರ ಜಯಂತಿ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅಕ್ಟೋಬರ್‌ ೨ ಬಂದ್ರೆ ಗಾಂಧಿ ಜಯಂತಿ ಎಂದು ಗೊತ್ತು. ಆದರೆ, ಗಾಂಧಿಜಿಯವರ ಬಗ್ಗೆ ಒಂದಿಷ್ಟು ವಿಷಯ ಯಾರು ಸಹ ತಿಳಿದುಕೊಳ್ಳಲು ಅಪೇಕ್ಷಿಸುವುದಿಲ್ಲ.ಅವರ ಬದುಕಿನ ಕೆಲವೇ ಕೆಲವು ತುಣುಕುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಈ ಘಟನೆಗಳಿಗೆ ದಾಖಲೆ ಮತ್ತು ಆಧಾರಗಳು ಸಹ ಇವೆ ಎಂದು ತಿಳಿಸಲು ಬಯಸುತ್ತೇನೆ. ಗಾಂಧೀಜಿಯವರು ಪತ್ರಕರ್ತರು ಸಹ ಆಗಿದ್ದರು. ೧೯೧೬ ರಲ್ಲಿ ಲಾಲಾ ಲಜಪತ್ ರಾಯ್ ಅವರು ಬರೆದ "ಯಂಗ್ ಇಂಡಿಯಾ" ಪುಸ್ತಕ /ಪತ್ರಿಕೆ ೧೯೧೯ ರಿಂದ ೧೯೩೧ ರವರೆಗೆ ಗಾಂಧೀಜಿಯವರು ಆರಂಭಿಸ್ತಾರೆ. ಅಲ್ಲದೆ, ೧೯೩೩ ರಲ್ಲಿ "ಹರಿಜನ್" ಎಂಬ ವಾರ ಪತ್ರಿಕೆಯನ್ನು ಸಹ ಆರಂಭಿಸ್ತಾರೆ. ಇದು ೧೯೪೮ ರವರಗೆ ನಡೆಯುತ್ತೆ ನಿಜ. ಆದರೆ, ಈ ಪತ್ರಿಕೆಗಳು ನಡೆಸುವ ಸಂದರ್ಭದಲ್ಲಿ, ಮಹಾತ್ಮ ಗಾಂಧೀಜಿಯವರು ಸಾರ್ವಜನಿಕ ಕಲೆಕ್ಷನ್ ಗೆ ಹೋಗ್ತಾರೆ, ಒಂದಷ್ಟು ಚಿನ್ನ, ಒಡವೆ, ಹಣವನ್ನು ಸಂಗ್ರಹಣೆ ಮಾಡಿ ಹರಿಜನರ ಸೇವೆಗಾಗಿ ಮುಡುಪಾಗಿಡ್ತಾರೆ ಎಂದು ಎಲ್ಲರೂ ಹೇಳುವ ಮತ್ತು ತಿಳಿದುಕೊಂಡಿರುವ ಸಂಗತಿ ಸತ್ಯಕ್ಕೆ ದೂರವಾದುದು. ಇದರಲ್ಲಿ ಇವರ ದೊಡ್ಡ ಕುತಂತ್ರವೇ ಅಡಗಿತ್ತು. ಈ ಕುತಂತ್ರ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನ ಬಿಟ್ರೆ ಯಾರಿಗೂ ತಿಳಿದಿರಲಿಲ್ಲ. ಮಹಾತ್ಮ ಗಾಂಧೀಜಿಯವರು ವಿದೇಶದಲ್ಲಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿಯೂ ಸೂಟು, ಬೂಟು, ಕೋಟುಗಳನ್ನೇ ಧರಿಸಿಕೊಂಡಿರ್ತಾರೆ. ಆದರೆ, ಭಾರತಕ್ಕೆ ಬಂದ ನಂತರದಲ್ಲಿ ಅವರ ಉಡುಗೆ ತೊಡುಗೆಗಳಲ್ಲಿ ಬದಲಾವಣೆಯಾಯ್ತು. ಇದು ಸತ್ಯ ಶೋಧನೆಯಾಗಬೇಕಾದ ವಿಷಯ. 


ಭಾರತದಲ್ಲಿ ಆಗಲೇ ೧೮೪೫ ರಿಂದಲೇ ಭಾರತದಲ್ಲಿ ಜ್ಯೋತಿಬಾ ಫುಲೆ ಅವರು ಆರಂಭಿಸಿದ ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿಯಾದ "ಸತ್ಯ ಶೋಧಕ ಸಮಾಜ" ದ ಮುಖಾಂತರ ಅಸ್ಪೃಶ್ಯತೆ ನಿವಾರಣೆ ಮಾಡುವುದಕ್ಕೆ ಹೋರಾಟ ಮತ್ತು ಚಳುವಳಿಗಳು ನಡೆದಿದ್ದವು. ಆ ಸಂದರ್ಭದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆ ಆಗಬೇಕೆಂದು ಯಾವುದೇ ಬಹಿರಂಗ ಸಭೆ ಮತ್ತು ಸಮಾರಂಭಗಳಲ್ಲಿ ಗಾಂಧೀಜಿಯವರು ಹೇಳಿಕೆ ನೀಡುವುದಿಲ್ಲ. "ನಿಮ್ಮ ಹಾಗೆ ನಾನು ಇರ್ತೇನೆ, ನಿಮ್ಮಂತೆಯೇ ನಾನು ಬಡವನಾಗಿರ್ತೇನೆ, ನಿಮ್ಮ ಹಾಗೆಯೇ ನಾನು ಬದುಕುತ್ತೇನೆ" ಎಂದು ಹೇಳುವ ಮುಖಾಂತರ ದಲಿತರ ಮನಸ್ಸು ಕುಗ್ಗಿಸಲು ಸಂಚು ಹೂಡುತ್ತಾರೆ. ಇದನ್ನು ಅರಿತುಕೊಂಡ ಡಾ. ಬಿ.ಆರ್. ಅಂಬೇಡ್ಕರ್ ಅವರು ಸೂಟು, ಬೂಟು, ಕೋಟು ಹಾಕಿಕೊಂಡೇ ಇದ್ದು, ದಲಿತರ ಮನಸ್ಸು ಪರಿವರ್ತನೆ ಮಾಡಲು ಸಫಲರಾಗ್ತಾರೆ. 


೧೮೯೭ ರಲ್ಲಿ ದೇಶದಲ್ಲಿನ ಜಾತಿ ವ್ಯವಸ್ಥೆ ಒಪ್ಪಿಕೊಂಡು, ಈ ವ್ಯವಸ್ಥೆ ಇದ್ದ ಹಾಗೆಯೇ ಇರಬೇಕೆಂದು ಹೇಳಿಕೆ ಕೊಟ್ಟವರು ಗಾಂಧೀಜಿಯವರು ಸಹ. ಇದಕ್ಕೆ ಸಾಕ್ಷಿ ಪುರಾವೆಗಳು ಸಹ ಉಂಟು. ಗಾಂಧೀಜಿಯವರ "ಆತ್ಮ ಚರಿತ್ರೆ" ಹಾಗೂ "ಯಂಗ್ ಇಂಡಿಯಾ" ಮತ್ತು "ಹರಿಜನ್" ಪತ್ರಿಕೆಗಳಲ್ಲಿ ಮಾಹಿತಿಗಳು ದೊರೆಯುತ್ತವೆ. ಅಲ್ಲದೆ, ಬಾಲ ಗಂಗಾಧರ ತಿಲಕ್ ಅವರ "ಕೇಸರಿ" ಎಂಬ ಪತ್ರಿಕೆಯಲ್ಲೂ ಸಹ ಮಾಹಿತಿ ಲಭ್ಯವಿದೆ. ೧೯೩೦, ೧೯೩೧, ೧೯೩೨ ರಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಬೇಡವೆಂದು ಮತ್ತು ಮಹಿಳೆಯರಿಗೆ ಮನೆ ನಿಭಾಯಿಸುವಷ್ಟು ಶಿಕ್ಷಣ ಕೊಟ್ಟರೆ ಸಾಕೆಂದು ಮೊಂಡು ವಾದ ಮಾಡ್ತಾರೆ ಗಾಂಧೀಜಿಯವರು. ಮಹಿಳೆಯರಿಗೆ ಉನ್ನತ ಶಿಕ್ಷಣ ಮತ್ತು ಆಂಗ್ಲ ಮಾಧ್ಯಮದ ಶಿಕ್ಷಣ ಅಗತ್ಯವಿಲ್ಲ, ಇದರಿಂದ, ಪೋಷಕರಿಗೆ ಮತ್ತು ಗಂಡಂದಿರರಿಗೆ ಹೊರೆಯಾಗ್ತಾರೆ ಎಂದು ತಿಳಿಸಿ, ಮಹಿಳೆಯರಿಗೆ ಶಿಕ್ಷಣ ನಿಷೇಧ ಮಾಡುವಂತಹ ಕೆಲ್ಸ ಗಾಂಧೀಜಿಯವರು ಮಾಡ್ತಾರೆ. ಒಂದು ವೇಳೆ ಗಾಂಧೀಜಿಯವರ ಮೊಂಡು ವಾದ ಯಥಾವತ್ತಾಗಿ ಜಾರಿಯಾಗಿದ್ದರೆ, ದೇಶದ ಯಾವ ಹೆಣ್ಣು ಮಹಿಳೆಯು ಮತದಾನದ ಹಕ್ಕು ಇದುವರೆಗೂ ಸಹ ಪಡೆಯುತ್ತಿರಲಿಲ್ಲ ಮತ್ತು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದು ದೇಶದ ಮಹಿಳೆಯರು ಮೊಟ್ಟ ಮೊದಲು ತಿಳಿದುಕೊಳ್ಳುವ ವಿಷಯ. ಇದನ್ನ ಅಲ್ಲೂ ಸಹ ಡಾ. ಬಿ. ಆರ್. ಅಂಬೇಡ್ಕರ್ ಅವರು ಒಪ್ಪದೇ ವಿರೋಧ ಮಾಡ್ತಾರೆ. ಅಂತಿಮವಾಗಿ ಮಹಿಳೆಯರಿಗೆ ಮತದಾನದ ಹಕ್ಕನ್ನು ಒದಗಿಸಿಕೊಟ್ಟವರು ಡಾ. ಬಿ.ಆರ್. ಅಂಬೇಡ್ಕರ್ ಅವರು. ಬ್ರಿಟೀಷರಿದ್ದ ಆಗಿನ ಭಾರತದಲ್ಲಿ ಮತದಾನ ಮಾಡುವ ಹಕ್ಕು ಕೇವಲ ಶ್ರೀಮಂತರು, ಭೂಮಾಲೀಕರು ಮತ್ತು ಸರ್ಕಾರಕ್ಕೆ ತೆರಿಗೆ ಪಾವತಿಸುವವರಿಗೆ ಮಾತ್ರ ನೀಡಲಾಗಿತ್ತು. ೧೯೧೯ ರ "ಸೌತ್ ಬರೋ" ಸಮಿತಿಯ ಮುಂದೆ ಮೊದಲ ಬಾರಿಗೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಮತದಾನದ ಹಕ್ಕಿನ ಮಹತ್ವವನ್ನು ಮಂಡಿಸ್ತಾರೆ. ನಂತರ, ೨೩.೧೦.೧೯೨೮ ರಂದು ವಯಸ್ಕ ಮತದಾನದ ಪದ್ದತಿ ಜಾರಿಗೆ ಪಟ್ಟು ಹಿಡಿದು, ಎಲ್ಲಾ ಗುಲಾಮಗಿರಿ ಸಂಕೋಲೆಗಳನ್ನು ಮುರಿದು ೧೯೫೦ ರಲ್ಲಿ ಸಂವಿಧಾನದ ಮುಖಾಂತರ ಮಹಿಳೆಯರಿಗೆ ಮತದಾನದ ಹಕ್ಕನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರು ಒದಗಿಸಿ ಕೊಡ್ತಾರೆ. 


ಇಂತಹ ಹಲವಾರು ಘಟನೆಗಳ ಕುರಿತು ಮತ್ತು ಗಾಂಧೀಜಿಯವರ ಬಗ್ಗೆ ಅನೇಕ ಸಂಗತಿಗಳು ಅವರ "ಆತ್ಮ ಕಥೆ" ಯಲ್ಲಿ ಉಲ್ಲೇಖವಾಗಿವೆ.  ಇಲ್ಲಿಯವರೆಗೂ ಹಲವು ವರ್ಷಗಳೇ ಕಳೆದರೂ ಸಹ ಸತ್ಯ ಸಂಗತಿಗಳು ತಿಳಿಯದೇ ಗಾಂಧೀಜಿಯವರನ್ನು ಆರಾಧಿಸುತ್ತಿರುವುದು ವಿಪರ್ಯಾಸವೇ ಸರಿ. 


ಕೆಲವು ಮಹಿಳಾ ಅಧಿಕಾರಿಗಳ ಮನೆಗಳಲ್ಲಿ ಮತ್ತು ಕಛೇರಿಗಳಲ್ಲಿ ಗಾಂಧೀಜಿಯವರ ಭಾವಚಿತ್ರವಿಟ್ಟು ಆರಾಧಿಸುತ್ತಿರುವುದನ್ನು ನಾನು ಖುದ್ದಾಗಿ ಕಂಡಿದ್ದೇನೆ. ಜೊತೆಗೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿಲ್ಲದಿರುವುದು ಮತ್ತು ಆರಾಧಿಸದೇ ಇರುವುದನ್ನೂ ಸಹ ಕಂಡಿದ್ದೇನೆ. ಭಾವಚಿತ್ರ ಇಡುವ ವಿಷಯ ಅದೇನೆ ಇರಲಿ. ಯಾರು ಮತ್ತು ಏನು ಕೊಡುಗೆ ನೀಡಿದ್ದಾರೆಂಬುದನ್ನು ತಿಳಿಯದೇ ಇರುವುದು ಮತ್ತು ತಿಳಿಯದಂತೆಯೇ ವರ್ತಿಸುವುದು ಮೂರ್ಖತನದ ಪರಮಾವಧಿ ಎಂದೇ ಹೇಳಬಹುದು. ಒಟ್ಟಾರೆಯಾಗಿ ಮಹಿಳೆಯರಿಗೆ ಮತ್ತು ದಲಿತ ಜನರಿಗೆ ಗಾಂಧೀಜಿಯವರ ಕೊಡುಗೆ ಶೂನ್ಯ. ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಮಾನ್ಯ. ಹೀಗಾಗಿ, ನಾವು ಮತ್ತು ನೀವು ಮತ್ತೆ ಎಲ್ಲರೂ ಸತ್ಯವನ್ನು ಅರಿತುಕೊಂಡು, ಯಾರನ್ನು ಆರಾಧಿಸಬೇಕು, ಯಾರನ್ನು ವಿರೋಧಿಸಬೇಕೆಂದು ಆತ್ಮಾವಲೋಕನೆ ಮಾಡಿಕೊಡು, ಸತ್ಯವನ್ನು ಶೋಧಿಸಿಕೊಂಡು, ಹತ್ತು ಹಲವಾರು ಪುಸ್ತಕಗಳನ್ನು ಓದಿ, ತಿಳಿದುಕೊಂಡು, ಪ್ರಬುದ್ಧ ಭಾರತವನ್ನಾಗಿ ನಿರ್ಮಾಣ ಮಾಡೋಣ.....


ಜೈ ಭೀಮ್...🙏


ಡಾ. ಶಿಲಾಸೂ, ಕಲಬುರಗಿ.

Image Description

Post a Comment

0 Comments