ಶೀರ್ಷಿಕೆ : *ಎಲ್ಲಿ ಮರೆಯಾದೆ*

 🙏🙏  *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏


ಶೀರ್ಷಿಕೆ : *ಎಲ್ಲಿ ಮರೆಯಾದೆ*



ಗೆಳೆಯ ನೀ ನನಗೇನು ಹೇಳದೆ 

ಕೇಳದೇ ಎಲ್ಲಿ ಮರೆಯಾದೆ 

ನಿನಗಾಗಿ ಕಾದುಸೋತುಹೋದೆ

ಬೇಗ ಸನಿಹ ಬರಬಾರದೆ 


ಕ್ಷಣ ಕ್ಷಣಕ್ಕೂ ನಾನು ಕಾತರಿಸಿದೆ 

ಏನಾಯಿತೊ ಎಂಬ ಭಯವಾಗಿದೆ 

ನಿನ್ನೆಯಷ್ಟೇ ನಾನು ಭೇಟಿಯಾಗಿದ್ದೆ 

ನೀ ಯಾವುದೋ ಚಿಂತೆಯಲ್ಲಿದ್ದೆ 


ಊರಿನಿಂದ ಅಮ್ಮನ ಕರೆ ಬಂತು ಎಂದೆ 

ತಳಮಳದಿ ನೀ ಕಸಿವಿಸಿ ಗೊಂಡಿದ್ದೆ 

ಯಾವ ವಿಚಾರವೆಂದು ತಿಳಿಯದಾದೆ 

ತಾಯಿಯ ಆರೋಗ್ಯ ಸರಿಯಿಲ್ಲ

ವೆಂದೆ 


ಊರಲ್ಲಿ ಮಾವನ ಮಗಳ ಮದುವೆ ಯಾಗಿದ್ದೆ 

ಪರಿಸ್ಥಿತಿ ಹಾಗೆ ಮಾಡಿಸಿತು ಎಂದು ಹೇಳಿದೆ 

ನಿನ್ನನ್ನೇ ನಂಬಿದ್ದ ನನಗೆ ಮೋಸ ಮಾಡಿದೆ 

ಕಾಣದೆ ಈಗಲೂ ಹಂಬಲಿಸುವಂತೆ ಮಾಡಿದೆ.


✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments