* ಗುರಿ ಬಿಡದೇ ನಡೆ *

 ವಿಷಯ ಚಿತ್ರ ಕವನ 


*ಗುರಿ ಬಿಡದೇ ನಡೆ*



ಏರಿದ ಮೇಲೆ ನೋಡಿದ ಜನರು 

ತೋರು ಬೆರಳು ಮಾಡುತಲಿ 

ಅದೇನು ಮಹಾದೊಡ್ಡದು ಎಂದರು 

ಸೇರದವರು ಕುಹಕ ನಗೆ ನಗುತಲಿ 


ಸಾಧನೆಯ ಮಾರ್ಗ ಬಲು ಕಠೀಣ

ವೇದನೆಯನು ಸಹಿಸಿ ಹೆಣಗುತ

ಹಾದಿಯಿದು ಹೂವು ಹಾಸಿಗೆಯಲ್ಲಣ್ಣ

ಭೋಧನೆ ಮಾಡುವರು ಹಂಗಿಸುತ


ಏರುವ ಪ್ರತಿ ಮೆಟ್ಟಿಲು ಮುಳ್ಳುಹಾದಿ 

ಒಂದೊಂದಾಗಿ ಹತ್ತಲು ನೂರು ನೋವು

ಸಹನೆ ತಾಳ್ಮೆಯು ಬೇಕು ಮುಟ್ಟಲು ತುದಿ 

ಮೇಲೆರಿದಂತೆ ನೋವಿನೊಡನೆ ನಲಿವು 


ಪಯಣದಿ ಮುಳ್ಳೆಂಬ ಸಂಕಷ್ಟಗಳು ಬರಲು 

ನಯನದಲಿ ಕಾತರಿಕೆಯ ನಿರೀಕ್ಷೆಯಿದೆ 

ಸಂಯಮದಿಂದ ಹಿಡಿದ ಗುರಿ ಬಿಡದೇ ಸಾಗುತಲಿ 

ಭಯವೆಲ್ಲ ಬದಿಗೊತ್ತಿ ಧೈರ್ಯದಿಂದಲಿ


*ಸ್ನೇಹದ ಸಂಕೋಲೆ ಪುಷ್ಪ* 🌹 🌹

Image Description

Post a Comment

0 Comments