"ರಾಜ್ಯಮಟ್ಟದ ಮಾಗನೂರ ಬಸಪ್ಪ ಪ್ರಶಸ್ತಿಗೆ ಭಾಜನರಾದ ಭಾಲ್ಕಿ ಶ್ರೀಗಳು":* *ಅಭಿನಂದನೆಗಳು*

 *"ರಾಜ್ಯಮಟ್ಟದ  ಮಾಗನೂರ ಬಸಪ್ಪ ಪ್ರಶಸ್ತಿಗೆ ಭಾಜನರಾದ ಭಾಲ್ಕಿ ಶ್ರೀಗಳು":* *ಅಭಿನಂದನೆಗಳು* 



ರಾಯಬಾಗ: ಬೀದರ ಜಿಲ್ಲೆ  "ಕನ್ನಡ ಮಠ" ಎಂದೇ ಹೆಸರು ಪಡೆದ ಭಾಲ್ಕಿಯ ಹಿರೇಮಠ ಸಂಸ್ಥಾನದ ಶ್ರೀ ಮ. ಘ. ಚ."ನಾಡೋಜ"  ಪುರಸ್ಕೃತ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರಿಗೆ ದಾವಣಗೆರೆಯ ಶರಣ ಮಾಗನೂರ ಬಸಪ್ಪ ಪ್ರತಿಷ್ಠಾನದಿಂದ ಕೊಡಮಾಡುವ 2023 ನೇ ಸಾಲಿನ  ರಾಜ್ಯಮಟ್ಟದ ಪ್ರತಿಷ್ಠಿತ "ಆರೂಢ ದಾಸೋಹಿ ಶರಣ ಮಾಗನೂರ ಬಸಪ್ಪ ಪ್ರಶಸ್ತಿಗೆ" ಭಾಜನರಾಗಿದ್ದು ಶನಿವಾರ ದಿ. 27 ರಂದು ಬೀದರ ನಗರದ ಡಾ. ಚೆನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆದ ಅಭೂತಪೂರ್ವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ  ರಾಯಬಾಗ ತಾಲ್ಲೂಕಿನ ಶರಣ ಸಾಹಿತಿಗಳು, ಗಣ್ಯರು  ಭಕ್ತಿಪೂರ್ವಕವಾಗಿ ಪೂಜ್ಯರನ್ನು ಅಭಿನಂದಿಸಿದ್ದಾರೆ.  


ಕಲ್ಯಾಣ ಕರ್ನಾಟಕದ ಅಭಿನವ ಬಸವಣ್ಣ ಎಂದೇ ಪ್ರಖ್ಯಾತಿ ಪಡೆದ ಭಾಲ್ಕಿಯ ಭಾಸ್ಕರರಾದ ಪೂಜ್ಯರು ಕಳೆದ ನಾಲ್ಕೈದು ದಶಕಗಳಿಂದ 12 ನೇ ಶತಮಾನದ ಬಸವಣ್ಣನವರು ಭೋದಿಸಿದ ಕಾಯಕ, ದಾಸೋಹ, ಪ್ರಸಾದ ತತ್ವಗಳನ್ನು ಬೋಧಿಸಿ ನಿತ್ಯ  ಬದುಕಿನುದ್ದಕ್ಕೂ ಮೈಗೂಡಿಸಿಕೊಂಡು ಅದಕ್ಕೆ             ಕಟಿಬದ್ದರಾಗಿ ಅನುಪಮ ಸಮಾಜ ಸೇವೆ ಮಾಡುತ್ತಿರುವುದು ಗಮನಾರ್ಹ. ಬಸವ ತತ್ವಗಳನ್ನೇ ಉಸಿರಾಗಿಸಿಕೊಂಡು ಕಲ್ಯಾಣ ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ತಮ್ಮ ಕರ್ತೃತ್ವ ಶಕ್ತಿಯಿಂದ ವೈಚಾರಿಕತೆಯ ನೆಲೆಗಟ್ಟಿನಲ್ಲಿ ಬಸವ ಧರ್ಮವನ್ನು  ಪ್ರಸರಣಗೊಳಿಸಿದ್ದು ಇವರ ಹೆಚ್ಚುಗಾರಿಕೆ. ಕನ್ನಡ ಸಾಹಿತ್ಯ ಲೋಕದಲ್ಲಿ ಮೌಲಿಕ ವೈವಿಧ್ಯಮಯ ಮೇರು ಕೃತಿಗಳನ್ನು ಸಮರ್ಪಸಿ "ವಿಶಿಷ್ಟ ಸಂತ ಸಾಹಿತಿ" ಎನಿಸಿಕೊಂಡಿದ್ದಾರೆಂದು ಇವರ ಪರಮ ಶಿಷ್ಯರು, ಸಾಹಿತಿಗಳು, ಕನ್ನಡ ಪ್ರಾಧ್ಯಾಪಕರಾದ ಡಾ. ಜಯವೀರ ಎ.ಕೆ.ಮುಕ್ತ ಕಂಠದಿಂದ ಶ್ಲಾಘಿಸಿದರು. ಅನಾಥ ಮಕ್ಕಳ ಪಾಲಕ ಪೋಷಕರಾಗಿ, ಗಡಿಯಲ್ಲಿ ಗುಡಿ ಗುಂಡಾರಗಳನ್ನು ಕಟ್ಟದೇ ವಿದ್ಯಾಮಂದಿರಗಳನ್ನು ನಿರ್ಮಿಸಿ    ಆ ಭಾಗದಲ್ಲಿನ ಅನೇಕ ವಿದ್ಯಾರ್ಥಿಗಳ ಬಾಳು ಬೆಳಗಿದ್ದು ಇವರ ಶೈಕ್ಷಣಿಕ ಕಳಕಳಿಗೆ ಒಂದು ಅತ್ಯುತ್ತಮ ನಿದರ್ಶನ ಎಂದು ಹಾರೂಗೇರಿಯ ಶರಣ ವಿಚಾರ ವಾಹಿನಿಯ ಸಂಸ್ಥಾಪಕ ಅಧ್ಯಕ್ಷರಾದ ಶರಣ ಶ್ರೀ ಆಯ್ ಆರ್ ಮಠಪತಿ, ಹಿರಿಯ ಶಿಕ್ಷಕ ಎಸ್ ಎಲ್ ಬಾಡಗಿ,ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕಾಧ್ಯಕ್ಷ ಆರ್ ಎಂ ಪಾಟೀಲ, ಪ್ರಾಧ್ಯಾಪಕರಾದ                     ಪ್ರೊ ಶ್ರೀಕಾಂತಗೌಡ ಮು.ಪಾಟೀಲ, ಡಾ. ವಿಲಾಸ ಕಾಂಬಳೆ, ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ತಾಲ್ಲೂಕು ಘಟಕಾಧ್ಯಕ್ಷ  ಟಿ ಎಸ್ ವಂಟಗೂಡಿ, ಕಬ್ಬೂರಿನ  ಶರಣ ಜೀವಿ  ಶ್ರೀಧರ ಮುರಾಳೆ, ಹಾಗೂ ಡಾ. ಬಸವರಾಜ ಹಳಕಲ್, ಮತ್ತಿತರ ಗಣ್ಯರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.


*ವರದಿ: ಡಾ.ಜಯವೀರ ಎ.ಕೆ*. 

         *ಖೇಮಲಾಪುರ*

Image Description

Post a Comment

0 Comments