* ಯುವಕರು ದೇಶ ಪ್ರೇಮ ಮೈಗುಡಿಕೊಳ್ಳಬೇಕು :ಯುವಕರ ರಕ್ತ ಕಣ ಕಣದಲ್ಲೂ ಭಾರತಾಂಬೆ ನಮ್ಮ ತಾಯಿ ಎಂಬ ಭಾವನೆ ಪುಟಿದೇಳಬೇಕು :ಪ್ರೊ ಎಸ್ ಎಮ್ ಹೆಳವರ *


 ಯುವಕರು ದೇಶ ಪ್ರೇಮ ಮೈಗುಡಿಕೊಳ್ಳಬೇಕು :ಯುವಕರ ರಕ್ತ ಕಣ ಕಣದಲ್ಲೂ ಭಾರತಾಂಬೆ ನಮ್ಮ ತಾಯಿ ಎಂಬ ಭಾವನೆ ಪುಟಿದೇಳಬೇಕು :ಪ್ರೊ ಎಸ್ ಎಮ್ ಹೆಳವರ 

ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಪ್ರತಿಷ್ಠಿತ ಎಸ್ ಪಿ ಎಮ್ ಕಲಾ, ವಾಣಿಜ್ಯ, ಮತ್ತು ವಿಜ್ಞಾನ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾರೂಗೇರಿ : 2023/ 24 ನೇ ಸಾಲಿನ 7 ದಿನಗಳ ವಿಶೇಷ ಸೇವಾ ಶಿಬಿರವನ್ನು ದತ್ತು ಗ್ರಾಮ ಅಳಗವಾಡಿಯಲ್ಲಿ ಆಯೋಜಿಸಲಾಗಿದೆ. ಎರಡನೇ ದಿನದ ಸಾಯಂಕಾಲ ಕಾರ್ಯಕ್ರಮ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಎಸ್.ಪಿ.ಎಂ.ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇತಿಹಾಸ ಉಪನ್ಯಾಸಕರಾದ ಶಿವಾನಂದ ಎಮ್ ಹೆಳವರ ಮಾತನಾಡಿ  ದೇಶದ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ಮುಖ್ಯ ಯುವಕರು ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು . ಯುವಕರ ರಕ್ತದ ಕಣ ಕಣದಲ್ಲೂ ಭಾರತಾಂಬೆ ನಮ್ಮ ತಾಯಿ ಎಂಬ ಭಾವನೆ ಪುಟಿದೇಳಬೇಕು ನಮ್ಮ ದೇಶ ನಮ್ಮ ನಾಡು ಕಾಪಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಯುವಕರು ಅರ್ಥೈಸಿಕೊಂಡಾಗ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು .

ಉಪಸ್ಥಿತರಿದ್ದ ಇನ್ನೋರ್ವ ಉಪನ್ಯಾಸಕ ಮಾಹಾಂತೇಶ ಶೇಗುಣಸಿ ಮಾತನಾಡಿ ವಿದ್ಯಾರ್ಥಿಗಳು ಸಂಸ್ಕಾರವಂತ ರಾಗಬೇಕು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಜೆ.ಬಿ.ಬರಡ್ಡಿ ಮಾತನಾಡಿ ವಿದ್ಯಾರ್ಥಿಗಳು ಸೇವಾ ಮನೋಭಾವ ಹೊಂದಿರಬೇಕು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಧಿಕಾರಿ ಪ್ರೊ ಭರತೇಶ ಕಾಂಬಳೆ ಸಹ ಶಿಬಿರಾಧಿಕಾರಿ ಡಾ.ವಿಲಾಸ ಕಾಂಬಳೆ ಉಪಸ್ಥಿತರಿದ್ದರು ಕುಮಾರಿ ಶಾರದಾ ಬ್ಯಾಗಿ ಸ್ವಾಗತಿಸಿದರು ಕು.ಸಂತ್ರಾಮ ಹಾಲಗೊಂಡ ನಿರೂಪಿಸಿದರು ದೀಪಾ ಬೀಳಗಿ ವಂದಿಸಿದರು.


 ವರದಿ : ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments