ಎನ್ ಎಸ್ ಎಸ್ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ : ವ್ಯಕ್ತಿತ್ವ ನಿರ್ಮಾಣದಲ್ಲಿ ಎನ್ ಎಸ್ ಎಸ್ ಪಾತ್ರ ಮುಖ್ಯ : ಶ್ರೀಮತಿ ಸುನೀತಾ ಅಳಗೊಂಡ
ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಪ್ರತಿಷ್ಠಿತ ಎಸ್ ಪಿ ಎಮ್ ಕಲಾ, ವಾಣಿಜ್ಯ, ಮತ್ತು ವಿಜ್ಞಾನ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾರೂಗೇರಿ : 2023/ 24 ನೇ ಸಾಲಿನ 7 ದಿನಗಳ ವಿಶೇಷ ಸೇವಾ ಶಿಬಿರವನ್ನು ದತ್ತು ಗ್ರಾಮ ಅಳಗವಾಡಿಯಲ್ಲಿ ಆಯೋಜಿಸಲಾಗಿದೆ. ಉದ್ಘಾಟನಾ ಸಮಾರಂಭದ ಮುಖ್ಯ ಅಥಿತಿಗಳಾಗಿ ಶ್ರೀಮತಿ ಸುನೀತಾ ಕೆ ಅಳಗೊಂಡ, ಮುಖ್ಯೋಪಾಧ್ಯಾಯರು, ಸರಕಾರಿ ಪ್ರೌಢ ಶಾಲೆ ಅಳಗವಾಡಿ, ಇವರು ಮಾತನಾಡುತ್ತ ವ್ಯಕ್ತಿತ್ವ ವಿಕಸನದಲ್ಲಿ ಎನ್ ಎಸ್ ಎಸ್ ನ ಪಾತ್ರ ಮಹತ್ವದ್ದಾಗಿದೆ , ನಾಯಕತ್ವ ಗುಣ, ಸಹನೆ, ತಾಳ್ಮೆ, ಹೊಂದಾಣಿಕೆ,ಸೇವಾ ಮನೋಭಾವನೆಯಿಂದ ಮಾತ್ರ ನಾಯಕನಾಗಿ ಹೊರ ಹೊಮ್ಮಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಉಪನ್ಯಾಸಕರಾದ ಡಾ. ಸಿ ಡಿ ಠಾಣೆ ವಹಿಸಿ ಮಾತನಾಡುತ್ತ,ಜೀವನದಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು ಬದ್ದ ಜೀವನ ತುಂಬಾ ಮುಖ್ಯ ಎಂದು ಹೇಳಿದರು.ವೇದಿಕೆಯ ವೇದಿಕೆಯ ಮೇಲೆ ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀ ಎಸ್ ಎಸ್ ಉಮಾರಾಣಿ, ಶಿಬಿರದ ಶಿಬಿರಧಿಕಾರಿಗಳಾದ ಪ್ರೊ ಬಿ. ಎ ಕಾಂಬಳೆ, ಸಹ ಶಿಬಿರಧಿಕಾರಿಗಳಾದ ಡಾ. ವಿಲಾಸ ಕಾಂಬಳೆ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪ್ರಾಥನಾ ಗೀತೆಯನ್ನು ಸಿದ್ದು ಹೊಸಮನಿ ಹಾಡಿದರು. ಎನ್ ಎಸ್ ಗೀತೆಯನ್ನು ಕನ್ನಡ ಅಧ್ಯಾಪಕ, ಕ್ರಾಂತಿಕಾರಿ ಹಾಡುಗಾರ ಡಾ. ವಿಲಾಸ ಕಾಂಬಳೆ ಮತ್ತು ಸ್ವಯಂ ಸೇವಕಿಯರು ಸುಶ್ರಾವ್ಯವಾಗಿ ಹಾಡಿದರು. ಪ್ರಾರಂಭದಲ್ಲಿ ಸ್ವಾಗತ ಮತ್ತು ಅತಿಥಿ ಪರಿಚಯವನ್ನು ಪ್ರೊ ಎಸ್ ಎಮ್ ಹೆಳವರ ನಡೆಸಿಕೊಟ್ಟರು. ಮಾಲಾರ್ಪಣೆ ಕಾರ್ಯಕ್ರಮವನ್ನು ಪ್ರೊ ಎಚ್ ಎಸ್ ಜೋಗನ್ನವರ ನಡೆಸಿ ಕೊಟ್ಟರು.ಮೇಲಿನ ಕೊನೆಯದಾಗಿ ಪ್ರೊ ಕೆ ಬಿ ಕೊಚೇರಿ ವಂದಿಸಿದರು. ಕಾರ್ಯಕ್ರಮದ ನಿರ್ವಹನೆಯನ್ನು ಪ್ರೊ ಡಿ ಎಮ್ ನಾಯ್ಕಅಚ್ಚು ಕಟ್ಟಾಗಿ ನಡೆಸಿಕೊಟ್ಟರು.ಇನ್ನುಳಿದಂತೆ ಪ್ರೊ ಆರ್ ಕೆ ಖಾಟಾಂವಿ, ಪ್ರೊ ಆರ್ ಎಮ್ ಮಾಲಗಾರ, ಪ್ರೊ ಕೆ ಎಸ್ ಭಜಂತ್ರಿ, ಪ್ರೊ ಕೆ ಎಸ್ ಹಾರೂಗೇರಿ,ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ : ಡಾ. ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments