* ದೈಹಿಕ ನಿರ್ದೇಶಕ ಎಚ್ ಎಸ್ ಜೋಗನ್ನವರ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ *
ರಾಯಬಾಗ ತಾಲೂಕಿನ ಪ್ರತಿಷ್ಠಿತ ಎಸ್ ಪಿ ಎಮ್ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾರೂಗೇರಿ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ, ದತ್ತು ಗ್ರಾಮವಾದ ಅಳಗವಾಡಿಯಲ್ಲಿ ಇಂದು ಸಾಯಂಕಾಲ 4 ಘಂಟೆಗೆ ದೈಹಿಕ ನಿರ್ದೇಶಕರಾದ ಪ್ರೊ ಎಚ್ ಎಸ್ ಜೋಗನ್ನವರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು *ಯೋಗದಿಂದ ಹೃದಯ ರೋಗ ತಡೆಗಟ್ಟುವಿಕೆ * ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಉಪನ್ಯಾಸಕರಾದ ಡಾ. ಸಿ ಡಿ ಠಾಣೆ ವಹಿಸಲಿದ್ದು, ಶ್ರೀಮತಿ ಪಿ ಕೆ ಪಾಟೀಲ್ ಉಪಸ್ಥಿತರಿರುವರು , ಕಾರ್ಯಕ್ರಮ ನಿರ್ವಹಣೆಯನ್ನು ಪ್ರೊ ಕೆ ಬಿ ಕೊಚೇರಿ ನಿರ್ವಹಿಸಲಿದ್ದಾರೆಂದು ಎನ್ ಎಸ್ ಎಸ್ ಶಿಬಿರಾಧಿಕಾರಿಗಳಾದ ಪ್ರೊ ಬಿ ಎ ಕಾಂಬಳೆ ಮತ್ತು ಸಹ ಶಿಬಿರಾಧಿಕಾರಿಗಳಾದ ಡಾ. ವಿಲಾಸ ಕಾಂಬಳೆ ಪತ್ರಿಕಾ ಪ್ರಕಠಣೆಯಲ್ಲಿ ತಿಳಿಸಿದ್ದಾರೆ.
ವರದಿ : ಬಸವೇಶ್ವರಿ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments