ಶೀರ್ಷಿಕೆ : “ ಆಷಾಢ ಮಾಸ”

 ಶೀರ್ಷಿಕೆ : “ ಆಷಾಢ ಮಾಸ”



ಆಷಾಢ ಮಾಸ ಬಂದಿತೇಕೆ 

ಬೆರೆತ ಹೃದಯಗಳು ಬೇರಾಗಿ 

ವಿರಹದ ಬೇಗೆ ಕಾಡಿತೇಕೆ 


ಚಂದ್ರನ ಕಿರಣ ಸುಡುತ್ತಲಿದೆ

ಚಳಿಗಾಳಿ ಮತ್ತಷ್ಟು ತಂಪಾಗಿದೆ

ತೊಟ್ಟ ಉಡುಗೆ ಬಿಗಿಯಾಗಿದೆ


ಅವನಲ್ಲಿ ಇವಳಲ್ಲಿ ನೋವಲ್ಲಿ 

ಆಷಾಢ ನಗುತ್ತಿದೆ ಅಲ್ಲಿ ಇಲ್ಲಿ 

ವಿರಹಾಗ್ನಿ ಸುನಾಮಿ ಎದೆಯಲ್ಲಿ 


ಹಸಿವಿಲ್ಲ ಉತ್ಸಾಹ ಉಲ್ಲಾಸವಿಲ್ಲ

ದಿನಗಳ ಬಿಡದಂತೆ ಎಣಿಸುತ್ತಿರುವೆ

ಶ್ರಾವಣದ ಸ್ವಾಗತಕ್ಕೆ ಕಾದಿರುವೆ 


✍️…ನಿಮ್ಮವನೆ..ರಾಜ್❣️

Image Description

Post a Comment

0 Comments