*ಮುಂಜಾವಿನ ಮಾತು*
ಎಳೆತನದ ಮೃದು ರೆಕ್ಕೆಗೆ
ಜಗದ ಕುತೂಹಲವುಂಟು
ಹರೆಯದ ಹುರುಪು ರೆಕ್ಕೆಗೆ
ಹಮ್ಮು ಬಿಮ್ಮಿನ ಸೊಕ್ಕುಂಟು
ಬಲಿತು ಬಳಲಿದ ರೆಕ್ಕೆಗೆ
ಅನುಭವದ ನೆರಳುಂಟು
ಯಾವ ಕಾಲವಾದರೂ
ಅರಿವಿನ ನಂಟಿರಲಿ ಮನವೇ
*ಶುಭೋದಯ*
*ರತ್ನಾಬಡವನಹಳ್ಳಿ*
0 Comments