ಆರ್. ಡಿ. ಎಸ್ : ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಮೂಡಲಗಿ : 2024 - 25 ನೇ ಶೈಕ್ಷಣಿಕ ಸಾಲಿನ ಪಿಯುಸಿ ಪ್ರಥಮ ವರ್ಗದ ಸ್ವಾಗತ : ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಹಾಗೂ ಎನ್ ಎಸ್ ಎಸ್, ಸ್ಕೌಟ್ಸ್, ರೆಡ್ ಕ್ರಾಸ್ ಘಟಕಗಳ ಉದ್ಘಾಟನಾ ಕಾರ್ಯಕ್ರಮ
ಮೂಡಲಗಿ : ದಿನಾಂಕ 25/7/2024 ರಂದು ಆರ್. ಡಿ ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಮೂಡಲಗಿ, ಸನ್ 2024- 25 ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಎನ್ ಎಸ್ ಎಸ್, ಸ್ಕೌಟ್ಸ್, ರೆಡ್ ಕ್ರಾಸ್ ಘಟಕಗಳ ಉದ್ಘಾಟನಾ ಕಾರ್ಯಕ್ರಮದ, ಉದ್ಘಾಟಕರಾಗಿ ಶ್ರೀ ಮಾತೋಶ್ರೀ ಕಾವ್ಯಶ್ರೀ ಅಮ್ಮನವರು, ರೇಣುಕಾಚಾರ್ಯ ಶಿವಲಿಂಗ ಆಶ್ರಮ ಹಿರೇಮಠ ಮತ್ತು ವೀರಭದ್ರಶ್ವರ ದೇವಸ್ಥಾನ ನಾಗನೂರ, ಆಗಮಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಹಿರಿಯ ಸಾಹಿತಿ, ಖ್ಯಾತ ಜಾನಪದ ಹಾಡುಗಾರ, ಕನ್ನಡ ಅಧ್ಯಾಪಕರಾದ ಶ್ರೀ ಟಿ ಎಸ್ ಒಂಟಗೋಡಿ ಅತಿಥಿಪರ ಭಾಷಣ ಮಾಡುವರು.ಇನ್ನುಳಿದಂತೆ ವೇದಿಕೆಯ ಮೇಲೆ ಶ್ರೀ ರಮೇಶ್ ಪಾಟೀಲ್, ಮಾಜಿ ಸದಸ್ಯರು ಗ್ರಾಮ ಪಂಚಾಯತ ಮುನ್ಯಾಳ, ಶ್ರೀ ಅನ್ವರ ನದಾಫ, ಅಧ್ಯಕ್ಷರು ಕಾಸೀಮ ಅಲಿ ಬ್ಯಾಂಕ ಮೂಡಲಗಿ ಆಗಮಿಸುವರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂತೋಷ ಪಾರ್ಶಿ, ವಿದ್ಯಾರ್ಥಿ / ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರೆಂದು ಪ್ರಚಾರ್ಯರಾದ ಶ್ರೀ ಎಸ್ ಸಿ. ಸತ್ತಿಗೇರಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ :ಡಾ. ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments