*ನನ್ನವಳು*


 *ನನ್ನವಳು* 


ನನ್ನವಳು ಮಲ್ಲಿಗೆ ಹೂವಿನಂತೆ

ಸುಂದರ ಸುಕುಮಾಲೆ.

ಅವಳ ನಗು ದುಂಡು ಮಲ್ಲಿಗೆಯಂತೆ ಸೌಂದರ್ಯದ ಉಯ್ಯಾಲೆ..!!


ನನ್ನವಳು ಪಾರಿಜಾತ ಪುಷ್ಪಾದಂತೆ

ಸ್ವರ್ಗದಿಂದ ಇಳಿದು ಬಂದವಳು.

ದೇವರ ಆರಾಧನೆಗೆ ಶ್ರೇಷ್ಠ ಪಾರಿಜಾತವಂತೆ ನನ್ನೊಲವಿನ ಆರಾಧನೆಗೆ ಶ್ರೇಷ್ಠ ನನ್ನವಳು..!!


ನನ್ನವಳು ಕಮಲದ ಹೂವಿನಂತೆ

ಮಾಸದ ನಗುವಿನ ಒಡತಿಯಾದವಳು.

ಕಮಲ ಕೆಸರಲ್ಲಿ ಅರಳಿದರೂ ದೇವರ ಮುಡಿಗೇರುವಂತೆ

ಪ್ರೀತಿಯಲ್ಲಿ ನನ್ನ ಹೃದಯ ಸಾಮ್ರಾಜ್ಯದ ಅಧಿಪತಿಯಾದವಳು...!!


ನನ್ನವಳು ಗುಲಾಬಿ ಹೂವಿನಂತೆ

ನೋಡಲು ಆಕರ್ಷಕ ಚೆಲುವೆ ಅವಳು.

ಪ್ರೀತಿಗೆ ಸಂಕೇತ ಗುಲಾಬಿಯಂತೆ

ನನ್ನ ಪ್ರೀತಿಯ ಜೀವಾಳ ನನ್ನವಳು....!!



     *- ಶ್ರೀಧರ ದೊಡಮನಿ.....✍️*

Image Description

Post a Comment

1 Comments