ವಿದ್ಯಾರ್ಥಿಗಳ ಶ್ರಮದಾನವೇ ಶ್ರೇಷ್ಠದಾನ : ಪ್ರೊ.ಎನ್.ಆರ್.ಪಾಟೀಲ್
ಚಿಕ್ಕೋಡಿ: ವಿದ್ಯಾರ್ಥಿಗಳ ಜೀವನದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಹಾಗೆಯೇ ತರಗತಿಯಲ್ಲಿ ಕಲಿಯುವ ವಿಧಾನ ಒಂದು ಕಡೆಯಾದರೆ, ತರಗತಿಯಿಂದ ಹೊರಗಡೆ ಕಲಿಯುವ ವಿಧಾನವು ಮತ್ತೊಂದು ವಿಷಯವಾಗಿರುತ್ತದೆ. ಅಂತಹ ವಿಷಯಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಾ ಸೇವಾ ಮನೋಭಾವವು ಬಂದಾಗಿದೆ. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ವಿದ್ಯಾರ್ಥಿಗಳ
ಶ್ರಮದಾನವೂ ಶ್ರೇಷ್ಠದಾನವಾಗಿದೆ ಎಂದು ಸದಲಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎನ್. ಆರ್. ಪಾಟೀಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಲಠ್ಠೆ ಶಿಕ್ಷಣ ಸಂಸ್ಥೆಯ ಶ್ರೀಮತಿ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಸೋಮವಾರ ಜನವಾಡದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ನನಗಲ್ಲ ನಿನಗೆ ಎಂಬುವುದು ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ ವಾಕ್ಯವಾಗಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ಸಮಾಜಕ್ಕೆ ತಮ್ಮದೇ ಆದ ಸೇವಾ ಮನೋಭಾವವನ್ನು ಒಳಗೊಂಡು ಗ್ರಾಮಗಳ ಅಭಿವೃದ್ಧಿಗೆ ತಮ್ಮದೇ ಆದ ಸೇವೆಯನ್ನು ಮಾಡಬೇಕೆಂದು ಕರೆ ನೀಡಿದರು. ಹಾಗೆಯೇ ಒಂದು ವಾರ ನಡೆಯುವ ಈ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಶ್ರಮದಾನದ ಜೊತೆಗೆ ವಿವಿಧ ಉಪನ್ಯಾಸಗಳನ್ನು ಆಯೋಜಿಸುವುದರಿಂದ ಬೌದ್ಧಿಕವಾಗಿ ಮತ್ತು ಶಾರೀರಿಕವಾಗಿ ಹೆಚ್ಚಿನ ದೃಢತೆ ತಮ್ಮಲ್ಲಿ ಉಂಟಾಗುವುದಕ್ಕೆ ಈ ರಾಷ್ಟ್ರೀಯ ಸೇವಾ ಯೋಜನೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕಿರಣ್.ಬಿ.ಚೌಗಲೆ ಮಾತನಾಡುತ್ತಾ ವಿದ್ಯಾರ್ಥಿಗಳ ಮಾನಸಿಕ ಚಟುವಟಿಕೆ ಮತ್ತು ದೈಹಿಕ ಚಟುವಟಿಕೆಗೆ ಎನ್ಎಸ್ಎಸ್ ಮುಖ್ಯ ವೇದಿಕೆಯಾಗುತ್ತದೆ. ಇಲ್ಲಿ ತರಗತಿಯ ಕೊಠಡಿಯಲ್ಲಿ ಕಲಿಯುವುದಕ್ಕಿಂತ ಸಮಾಜದಲ್ಲಿ ಕಲಿಯುವ ವಿಷಯಗಳು ಅಪಾರವಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಜನವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಕಾಶಿಬಾಯಿ ಮಹದೇವ ಚೌಗಲೆ ಶಿಬಿರವನ್ನು ಉದ್ಘಾಟಿಸಿದರು. ರಾಮಗೌಡ ಪಾಟೀಲ, ಸನಾತನ ಶಂಕರ ಮಗದುಮ್ಮ, ಮಹೇಂದ್ರ ರಾಮಚಂದ್ರ ಮುದ್ದಾಳೆ, ಪೀರಗೊಂಡ ಅಣ್ಣ ಸಾಹೇಬ್ ಮಗದುಮ್, ಉದಯಕುಮಾರ ದಯಾನಂದ ಪಾಟೀಲ್, ಡಾ.ಅಪ್ಪಾಸಾಹೇಬ ಬಾ ಘಾಟಗೆ, ಶಿವಾನಂದ ಗುಡ್ಡನವರ, ಮರಿಗೌಡ ಪಾಟೀಲ್, ಜ್ಯೋತಿ ಬಾ ಶಂಕರ ಮೊಕಾಶಿ, ರಾಮಚಂದ್ರ ಅಣ್ಣಾಸಾಬ ಚೌಗಲೆ, ಲಕ್ಕವ್ವಾ ಪೂಜಾರಿ, ಪ್ರೊ. ದೀಪಕ್ ಬುರುಡ್, ಪ್ರೊ.ಬಸವರಾಜ್ ಹಿಟ್ನಾಳ್ ಪ್ರೊ.ಪ್ರವೀಣ್ ದೇಸಾಯಿ ಪ್ರೊ.ಅಶ್ವಿನಿ ಪಾಟೀಲ್ ಪ್ರೊ. ಚೈತ್ರ ಡಾ. ಮಹದೇವ ಮೊಕಾಶಿ ಪ್ರೊ.ವಿನಾಯಕ್ ಮಾದಿಗ ಡಾ. ಹೊಂಬಯ್ಯ ಉಪಸ್ಥಿತರಿದ್ದರು.
ಧನಶ್ರೀ ಚೌಗಲೆ ಮತ್ತು ಸಂಗಡಿಗರು ಎನ್ಎಸ್ಎಸ್ ಗೀತೆ ಹಾಡಿದರು. ಋತುಜ ಚೌಗಲೆ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಡಾ. ಗೋಪಾಲ್ ಎಸ್ ಸುತಾರ್ ಪ್ರಸ್ತಾವಿಕ ಮತ್ತು ಸ್ವಾಗತ ಮಾಡಿದರು. ಜ್ಯೋತಿ ಭತ್ತೆ ಅತಿಥಿಗಳ ಪರಿಚಯ ಮಾಡಿದರು. ಡಾ. ಜಿ. ಪಿ ಸವದಿ ಎನ್ಎಸ್ಎಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಣಾಲಿ ಮಗದುಮ್ ವಂದಿಸಿದರು. ನೂರು ಸ್ವಯಂ ಸೇವಕರು, ಜನವಾಡ ಗ್ರಾಮಸ್ಥರು ಉಪಸ್ಥಿತರಿದ್ದರು. ಪರಿಸರ ಅರಿವು ಜಾಥಾ ನಡೆಸಲಾಯಿತು.
ವರದಿ :ಡಾ. ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments