* ಡಾ. ಮಾಸ್ತಿ ಬಾಬು ಅವರಿಗೆ :ಕುವೆಂಪು ಗೌರವ ಪುರಸ್ಕಾರ *

ಡಾ. ಮಾಸ್ತಿ ಬಾಬು ಅವರಿಗೆ :ಕುವೆಂಪು ಗೌರವ ಪುರಸ್ಕಾರ


 


ಮಾಸ್ತಿಗೆ ಮತ್ತೊಂದು ಪ್ರಶಸ್ತಿ

ಭಾನುವಾರ : ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ತಾರಾಮಂಡಲ, ಸಿರಿಗನ್ನಡ, ಚಿತ್ರದುರ್ಗ ಇವರು ಆಯೋಜಿಸಿದ 'ರಾಷ್ಟ್ರಕವಿ ಕುವೆಂಪು ಅವರ ಸ್ಮರಣೆಯಲ್ಲಿ ಸ್ವಾಭಿಮಾನಿ ಕನ್ನಡ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಕುವೆಂಪು ಗೌರವ ಪ್ರಶಸ್ತಿಯನ್ನು ನೀಡಿದರು. ಕನ್ನಡವನ್ನೇ ಉಸಿರನ್ನಾಗಿಸಿಕೊಂಡು ಅನೇಕ ಕನ್ನಡ ಪರ ಕಾರ್ಯಗಳನ್ನು ಮಾಡುತ್ತಿರುವ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದ ಡಾ. ಮಾಸ್ತಿ ಬಾಬು ಅವರ ಸೇವೆಯನ್ನು ಗುರ್ತಿಸಿ, ಇವರು ವಿದ್ಯಾರ್ಥಿಗಳಲ್ಲಿ ಭಾಷಾಭಿಮಾನ ಮೂಡಿಸಲು ಸಿರಿಕನ್ನಡ ಪ್ರತಿಭಾ ಪರೀಕ್ಷೆಯನ್ನು ಅನೇಕ ವರ್ಷಗಳಿಂದ ನಡೆಸಿಕೊಟ್ಟ ನಿಮಿತ್ತ  ಮಾಸ್ತಿ ಬಾಬು ಅವರಿಗೆ ಕುವೆಂಪು ಗೌರವ ಪ್ರಶಸ್ತಿಯನ್ನು ಖ್ಯಾತ ಲೇಖಕಿಯಾದ ಶ್ರೀಮತಿ ಎಚ್.ಎಲ್.ಪುಷ್ಪಾ ಅವರು ನೀಡಿ ಸನ್ಮಾನಿಸಿರುತ್ತಾರೆ. ಭೀಮ ಬೆಳಕು ತಂಡದಿಂದ ಮಾಸ್ತಿ ಬಾಬು ಅವರಿಗೆ ಮತ್ತಷ್ಟು ಪ್ರಶಸ್ತಿಗಳು ಸಿಗಲಿ ಎಂದು ಹಾರೈಸುತ್ತಿದ್ದೇವೆ. ಶ್ರೀಯುತರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದು ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಈ ಕಾರ್ಯಕ್ರಮವನ್ನು ಆಯೋಜಿಸಿದ ಸಿರಿಗನ್ನಡ ಸಂಚಾಲಕರಾದ ಶ್ರೀಯುತ ಚಳ್ಳಕೆರೆ ಎರ್ರಿಸ್ವಾಮಿಯವರ ಕನ್ನಡ ಭಾಷಾಭಿಮಾನಕ್ಕೆ ಧನ್ಯವಾದಗಳು.


ವರದಿ : ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments