* ಹೊಸರೀತಿ*

 ಭಾವಗೀತೆ


*ಹೊಸರೀತಿ*



ದಿನವೂ ನೋಡುವಾಸೆಯು.. ಗೆಳತಿ ನಿನ್ನನೂ..

ನಿನ್ನ ಸೇರಿ ಬಾಳುವಾಸೇ  ಒಪ್ಪು  ನನ್ನನೂ....

ಮನದುಂಬಿ ಭಾವದ ಮಳೆ ಬರಲಿ ಗೆಳತಿ 

ಚಿಗುರುವಾಸೆ ಮೊಳೆಕೆಯೊಡೆಯಲಿ ಹೊಸರೀತಿ


ಕನಸಲ್ಲೂ ನನಸಲ್ಲೂ ನೀನೇ ನೆನಪಲಿ

ಭರವಸೆಯ ಹೊಸಲೋಕ ತೆರೆದೆ ನನ್ನ ಕಣ್ಣಲಿ

ನೋವು ನಲಿವು ಸುಖ ದುಃಖ ಎಲ್ಲ ನೀನೇ...

ತಿಳಿ ತಿಳಿದು ನಮ್ಮ ನಡುವೆ ಈ ಅಂತರವೇನೇ


ಮರೆಯದಿರು ನಾ ಪ್ರೀತಿಸುತ್ತಲೇ ಇರುವೆ

ಜೀವನದ ಪ್ರತಿಕ್ಷಣವೂ ಹಂಬಲಿಸುತಿರುವೆ

ಹೊಸತನ ಪ್ರೇಮವು ನನದು ನಿನಗೆ ಬೇಡವೇ

ನನ್ನೊಡಲ  ಸೇರುವೆಯಾ ಉಸಿರನ್ನೇ ನೀಡುವೆ


*ಅಶೋಕ ಬೇಳಂಜೆ*

Image Description

Post a Comment

0 Comments