* ನವಿಲುಗಿರಿಯ ಚೆಲುವೆ *

 *ನವಿಲುಗಿರಿಯ ಚೆಲುವೆ* 



ನವಿಲುಗಿರಿಯ ಅಕ್ಕರೆ ಸಿಹಿ ನನ್ನಾಕಿ,

ಈ ಬಂಡಾಯ ನೆಲದ ಹಸಿರ ಹೊದ್ದಾಕಿ,

ಗಗನಚುಕ್ಕಿ ಬರಚುಕ್ಕಿ ನಗೆಯಾಕಿ ,

ನವಿಲುಗಿರಿಯ ನವಿಲಿನ ಮೊಗದಾಕಿ...!!


ಉತ್ತರಕ್ಕೆ ತತ್ತರವಾದವಳು

ದಕ್ಷಿಣದ ಹೊತ್ತಿಗೆಗೆ ಭೀತಿಯಾದವಳು,

ಕರುಣೆಯ ಕರಾವಳಿಗೆ ಕಣ್ಣಾದವಳು

ಬಯಲು ಸೀಮಿಗೆ ಹನಿ ನೀರಾದವಳು...!!


ನೀಲಮ್ಮನ ಕೆರೆಯ ಬೆಳಕ ಪ್ರಭೆನೋಡು,

ಈ ಬೆಣ್ಣೆ-ತುಪ್ಪರಿ ಹಳ್ಳದ ಸೌಂದರ್ಯ ಹೊದ್ದವಳು

ಭವ್ಯ ನವಿಲುಗಿರಿಯ ಮುಗ್ಧ ಭಾವದವಳು..!!


ಏನು ಹೇಳಲಿ ಗೆಳತಿ ಅದ್ಭುತವೆ ನೀನು

ಈ ನವಲಗುಂದದ ಹೆಮ್ಮೆಯ ಕನ್ನಡತಿ ನೀ

ನೀನು ನೀನೆ ನಿನ್ನಾತ್ಮಕ್ಕೆ ದೊರೆಯು ನಾನೆ..!!



       - ದೊಡ್ಮನೆಹುಡ್ಗ ಶ್ರೀಧರ...✍️

                 ಧಾರವಾಡ

Image Description

Post a Comment

0 Comments