*ಗಜ಼ಲ್*
ಮತ್ತೊಮ್ಮೆ ಮಗದೊಮ್ಮೆ ನೋಡುವ ಆಸೆ ಮುದ್ದು ಚೆಲುವೆ
ಕಣ್ರೆಪ್ಪೆ ಆರಿಸದೆಯೇ ತುಂಬಿಕೊಳ್ಳುವ ತವಕ ಪೆದ್ದು ಚೆಲುವೆ
ಮುದ ನೀಡುವ ಮಧು ಮಾತಿನಲ್ಲಿ ಬೆರೆತು ಆಳಕ್ಕೆ ಇಳಿಯಲೆ
ಬೀಗುತ್ತಿರುವೆ ಚಲುವ ಸಿರಿಯನು ಬಹುವಾಗಿ ಕದ್ದು ಚೆಲುವೆ
ನನಗೆ ನಾನೇ ಸ್ಪರ್ಧಿ ಇಲ್ಲಿ ಧಾರಕ ಆರಾಧಕನು ನಾನಾಗಿರುವೆ
ಪ್ರತಿಗಾಮಿಯೆ ಅನುಗಮ ನಿಗಮ ಎನಗೆ ನೀ ಮದ್ದು ಚೆಲುವೆ
ನಂಬಿಕೆ ವಿಶ್ವಾಸ ನಮ್ಮಿಬ್ಬರ ಶ್ವಾಸವಾಗಲಿ ಒಂದೇ ಪ್ರಾಣದಿಂ
ಜಗತ್ತನ್ನು ಗೆಲ್ಲದಿದ್ದರು ತೋರುವೆ ನಿನ್ನಂತರಂಗ ಗೆದ್ದು ಚೆಲುವೆ
ಶಶಿರವಿಯ ಇಂಪಾದ ಕೊಳಲು ಜಗವ ತೂಗಿ ಊದಿದೆ ರಾಗ
ನೀ ಎನ್ನಯ ಬಿನ್ನಹವ ಎಂದಿಗೂ ಮಾಡದಿರು ರದ್ದು ಚೆಲುವೆ
*ರೇಖಾ ವಿ ಕಂಪ್ಲಿ* ✍️
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments