ಶೀರ್ಷಿಕೆ : *ಬೆಳದಿಂಗಳು*

 🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏


ಶೀರ್ಷಿಕೆ : *ಬೆಳದಿಂಗಳು*



ಹಾಲಿನ ಬೆಳಕು ಸುತ್ತಲೂ ಹರಡಿದೆ 

ಶೀತಲ ಚಂದಿರನಲ್ಲೂ ಸಮರವಿದೆ 

ನಿನ್ನಯ ಮೊಗವನು ನೋಡಿ ನಾಚಿ ನೀರಾಗಿದೆ 

ನೋಡುತ್ತಾ ನಿನ್ನ ಮೇಲೆ ಮತ್ಸರ ತೋರಿದಂತಿದೆ 


ಬೆಳದಿಂಗಳೇ ಹೆಣ್ಣಾಗಿ ಬಂತಂತಿದೆ 

ಪೂರ್ಣ ಮೊಗವು ಚಂದಿರನಂತೆ ಹೊಳೆಯುತ್ತಿದೆ 

ಹಾಲಿನ ಬೆಳಕಿನಲ್ಲಿ ಮಿಂದು ಬಂದಂತಿದೆ 

ಮುಗುಳುನಗೆ ಬೀರಿ ಮೋಡಿ ಮಾಡಿ ದಂತಿದೆ 


ಅಂದು ನಿನ್ನ ನೋಡಿದಾಗಲೇ 

ನನ್ನಲ್ಲೇ ನಾನಿಲ್ಲ ನಿನ್ನ ನೆನೆಸಿ ಕೊಂಡಾಗಲೇ 

ಮನವೆಲ್ಲಾ ಆವರಿಸಿರುವೆ ಕುಡಿ ನೋಟ ಬೀರಿದಾಗಲೇ 

ಕುಣಿದು ಕುಪ್ಪಳಿಸಿದೆ ಮನ ಕೈ ಹಿಡಿದು ನಡೆದಾಗಲೇ 


ನಾ ಪೂರ ಶರಣಾಗಿರುವೆ ಕಂಡಿರುವೆಯ

ನನ್ನ ಜೀವನ ಪಾವನ ವಾಯ್ತೆಂದು ತಿಳಿದೆಯ 

ನಿನ್ನ ಪ್ರೀತಿಯ ಸಾಗರದಲ್ಲಿ ಮುಳುಗಿರುವೆ ತಿಳಿದೆಯ

ನಾವಿಬ್ಬರು ಈಜಿ ದಡ ಸೇರುವ ಬಳಿ ಬಾರೆಯ 


✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು

Image Description

Post a Comment

0 Comments