* ಸರ್ವ ಜನಾಂಗದ ಅಭಿವೃದ್ದಿಯ ಹರಿಕಾರ ನಾಡಪ್ರಭು ಕೆಂಪೇಗೌಡ : ಡಾ.ಹೊಂಬಯ್ಯ*

 ಸರ್ವ ಜನಾಂಗದ ಅಭಿವೃದ್ದಿಯ ಹರಿಕಾರ ನಾಡಪ್ರಭು ಕೆಂಪೇಗೌಡ : ಡಾ.ಹೊಂಬಯ್ಯ




ರಾಯಬಾಗ: ಬೆಂಗಳೂರು ನಗರ ನಿರ್ಮಾತೃ ದಕ್ಷ ಆಡಳಿತಗಾರ ಹಾಗೂ ಅಭಿವೃದ್ಧಿಯ ಹರಿಕಾರ, ನಾಡಪ್ರಭು ಕೆಂಪೇಗೌಡ ಅವರು ಹಲವು ಕಸಬುಗಳನ್ನು ಒಳಗೊಂಡಿರುವ ಸರ್ವ ಜನಾಂಗದ ಅಭಿವೃದ್ಧಿಗಾಗಿ 64 ಪೇಟೆಗಳನ್ನು ಪ್ರಾರಂಭ ಮಾಡಿದ ಹರಿಕಾರ  ಎಂದು ಸಾಹಿತಿ ಡಾ.ಹೊಂಬಯ್ಯ ಅಭಿಪ್ರಾಯಪಟ್ಟರು.


ರಾಯಬಾಗ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ ನಾಡಪ್ರಭು ಕೆಂಪೇಗೌಡ ಅವರ 515ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು. 


ನಾಡಪ್ರಭು ಕೆಂಪೇಗೌಡ ಅವರು ಸಾವಿರಾರು ವರ್ಷಗಳ ಇತಿಹಾಸವಿರುವ ಮನೆತನದ ಧೀಮಂತ ವ್ಯಕ್ತಿ. ನಾಡಪ್ರಭು ಕೆಂಪೇಗೌಡ ಅವರ ಮನೆತನದ ಹಿರಿಯರು ಕರ್ನಾಟಕದ ಆವತಿ ಪ್ರದೇಶಕ್ಕೆ ಬಂಧು ನೆಲೆಸಿದರು. ರಣಭೈರೇಗೌಡ ಅವರ ಮೊದಲ ಮಗ ಜಯಪ್ಪಗೌಡ ಯಲಹಂಕ ಭೂಪಾಲ ಎಂದು ಹೊಯ್ಸಳರಿಂದ ಬಿರುದನ್ನು ಪಡೆದುಕೊಂಡಿದ್ದರು. ಜಯಪ್ಪಗೌಡನ ಹಿರಿಯ ಮಗ ಗಿಡ್ಡಪ್ಪ ಗೌಡರು ಅವರ ದೊಡ್ಡ ಮಗ ಕೆಂಪನಂಜೇಗೌಡ ಅವರು ಯಲಹಂಕದ ಸಾಮಂತರಜರಾಗಿ ಆಳ್ವಿಕೆ ಮಾಡುತ್ತಿದ್ದರು ಎಂದು ತಿಳಿಸುತ್ತಾ, ವಿಜಯನಗರದ ಸಾಮ್ರಾಜ್ಯದ ಪ್ರಧಾನ ಸೇನಾಪತಿಯಾದ ನರಸನಾಯಕ ಅಧಿಕಾರವನ್ನು ಸ್ವೀಕರಿಸಿದ ನಂತರ ನರಸನಾಯಕನ ಮಗನಾದ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಅಮರನಾಯಕ ಎಂಬ ಬಿರುದನ್ನು ಪಡೆದು ಬೆಂಗಳೂರು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ‌ಎಂದು ಮಾಹಿತಿ ನೀಡಿದರು.


ಕೆಂಪನಂಜೇಗೌಡರ ನಂತರ ಅಧಿಕಾರ ಸ್ವೀಕರಿಸಿದ ಕೆಂಪೇಗೌಡ ಅವರು ವಿಜಯ ನಗರ ಸಾಮ್ರಾಜ್ಯದ ಅತ್ಯುತರಾಯರ ಸಹಾಯದಿಂದ ಯಲಹಂಕ ಸಂಸ್ಥಾನಕ್ಕೆ ಭದ್ರವಾದ ಕೋಟೆ ಕಟ್ಟಿದ ಘಟನೆಯನ್ನು ವಿವರಿಸಿದರು.


ತದನಂತರ ವಿಶಾಲವಾದ ಅಭಿವೃದ್ಧಿಯ ಕನಸು ಕಂಡಂತಹ ನಾಡಪ್ರಭು ಕೆಂಪೇಗೌಡ ಅವರು ಸರ್ವ ಜನಾಂಗದ ಶಾಂತಿಯ ತೋಟ ಬೆಂಗಳೂರ್ ನಿರ್ಮಾಣ ಮಾಡಲು ಕಂಕಣಭದ್ಧರಾದರು. ಜೊತೆಗೆ ಹಲವು ವಿದ್ಯೆಗಳಲ್ಲಿ ಪರಿಣಿತಿ ಪಡೆದ ಕೆಂಪೇಗೌಡ ಅವರು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ಹರಳೆಪೇಟೆ , ಅಕ್ಕಿಪೇಟೆ, ಕುಂಬಾರಪೇಟೆ, ರಾಗಿಪೇಟೆ ಗಾಣಿಗರಪೇಟೆ, ಮಡಿವಾಳಪೇಟೆ ಹೀಗೆ ವಿವಿಧ ಕುಲಕಸುಬುಗಳನ್ನು ಒಳಗೊಂಡಿರುವ ಜನಾಂಗದವರಿಗೆ ವ್ಯಾಪಾರ ವ್ಯವಹಾರ ಮಾಡಲು ಅನುವು ಮಾಡಿಕೊಟ್ಟರು ಎಂದು ಕೆಂಪೇಗೌಡ ಅವರನ್ನು ಬಣ್ಣಿಸಿದರು. 


ಕೆಂಪೇಗೌಡರು ರೈತರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು. ವ್ಯವಸಾಯದ ದೃಷ್ಟಿಯಿಂದ ಕೆಂಪಾಂಬದಿಕೆರೆ ಥರ್ಮಾಂಬಿಕೆರೆ ಹಲಸೂರು ಕೆರೆ ಹೀಗೆ ಹಲವು ಕೆರೆಗಳನ್ನು ಕಟ್ಟಿಸಿ ರೈತರ ಮುಖದಲ್ಲಿ ಸಂತೋಷವನ್ನುಂಟು ಮಾಡಿ ಅವರ ಬೆಳವಣಿಗೆಗೆ ಕಾರಣಕರ್ತರಾದರು. .

 ಇದಲ್ಲದೆ ರೈತರು ಬೆಳೆದ ವಸ್ತುಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗುವ ರೀತಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣ ಮಾಡಿದರು ಎಂದು ಮಾಹಿತಿ ನೀಡಿದರು. 


ಕೆಂಪೇಗೌಡ ಅವರು ಪರಿಸರ ಪ್ರೇಮಿ ಎಂದು ತಿಳಿಸುತ್ತಾ ಬೆಂಗಳೂರಿನಲ್ಲಿ ನಾಲ್ಕು ಉದ್ಯಾನವನಗಳನ್ನು ನಿರ್ಮಾಣ ಮಾಡಿದರು ಜೊತೆಗೆ ಹಿಂದೂ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ  ಗವಿ ಗಂಗಾಧರೇಶ್ವರ ದೇವಾಲಯ, ಹಲಸೂರು ಸೋಮೇಶ್ವರ ದೇವಾಲಯಗಳನ್ನು ಕಟ್ಟಿದರೆ ಅಂತ ತಿಳಿಸಿದರು. 


ಈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಯಬಾಗ ತಾಲೂಕಿನ ತಹಸಿಲ್ದಾರ್ ಮತ್ತು ದಂಡಾಧಿಕಾರಿಗಳಾದ ಸುರೇಶ್ ಮಾನ್ಜೆ ಅವರು ಕೆಂಪೇಗೌಡ ಅವರ ಜೀವನ ಸಾಧನೆಗಳು ಇಂದಿನ ಯುವಕರು ಅರ್ಥ ಮಾಡಿಕೊಳ್ಳಬೇಕು.. ಜೊತೆಗೆ ಅವರ ಅಪ್ರತಿಮ ಹೋರಾಟ ದುರದಷ್ಟಿತ್ವದ ಮನಸ್ಸು 

ಮಾರ್ಗದರ್ಶನವಾಗಬೇಕೆಂದು ತಿಳಿಸಿದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ, ವೈದ್ಯಾಧಿಕಾರಿ ಅರುಣ್ ಕಾಂಬಳೆ, ಸಮನ್ವಯ ಅಧಿಕಾರಿ ಕಾಂಬಳೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಅರುಣ್ ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು. 


ನಾಡಪ್ರಭು ಕೆಂಪೇಗೌಡ ಅವರ 515ನೇ ಜನ್ಮದಿನಾಚರಣೆ ಅಂಗವಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಪುಸ್ತಕ ನಗದು ಬಹುಮಾನ ನೀಡಿದರು. ಜೊತೆಗೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ರಾಯಭಾಗ ತಾಲೂಕಿನ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು, ಉಪಸ್ಥಿತರಿದ್ದರು.


ವರದಿ :ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments