* ಬಾಲಕˌಪಾಲಕˌಶಿಕ್ಷಕ ಶಿಕ್ಷಣದ ಸಿರಿ ಸ್ತಂಭಗಳು: ಎಮ್.ಕೆ.ಸತ್ತಿಗೇರಿ*

 ಬಾಲಕˌಪಾಲಕˌಶಿಕ್ಷಕ ಶಿಕ್ಷಣದ ಸಿರಿ ಸ್ತಂಭಗಳು: ಎಮ್.ಕೆ.ಸತ್ತಿಗೇರಿ




ರಾಯಬಾಗ

ಶಾಲೆಗಳು ಜೀವಂತ ದೇವಾಲಯಗಳಾಗಿದ್ದು ಅವುಗಳ ಕುರಿತು ಪವಿತ್ರ ಭಾವನೆ ಬೆಳೆಸಿಕೊಳ್ಳಬೇಕೆಂದು ಸಪ್ತಸಾಗರ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಎಮ್.ಕೆ.ಸತ್ತಿಗೇರಿ ಹೇಳಿದರು.ಅವರು ಸನಿಹದ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಎಸ್.ಡಿ.ಎಮ್.ಸಿ ಮತ್ತು ಪಾಲಕರ ಸಭೆಯ ಉಸ್ತುವಾರಿ ಅಧಿಕಾರಿಗಳಾಗಿ ಆಗಮಿಸಿ ಮಾತನಾಡುತ್ತಾ ಸುತ್ತಮುತ್ತಲಿನ ಪರಿಸರದಲ್ಲಿ ಚಿಕ್ಕೂಡ ಶಾಲೆಯ ಶಿಕ್ಷಣದ ಗುಣಮಟ್ಟ ಎತ್ತರವಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಮ್.ಸಿ ಅಧ್ಯಕ್ಷ ಲಕ್ಷ್ಮಣ ಪಾಟೀಲ ಮಾತನಾಡಿ ಶಾಲೆಯ ಬೆಳವಣಿಗೆಗಾಗಿ ಎಲ್ಲರೂ ಒಂದಾಗೋಣˌಮುಂದಾಗೋಣವೆಂದು ಆಶಿಸಿದರು.ಮುಖ್ಯೋಪಾಧ್ಯಾಯ ರವೀಂದ್ರ ಪಾಟೀಲ ಪ್ರಾಸ್ತಾವಿಕ ನುಡಿಪುಷ್ಪಗಳನ್ನು ಅರ್ಪಿಸುತ್ತಾ ಶೈಕ್ಷಣಿಕ ಯೋಜನೆಗಳ ಮೇಲೆ ಬೆಳಕು ಚೆಲ್ಲಿದರು.

 ಶಿವಾನಂದ ತೇಲಿˌಮಹಾಂತಯ್ಯ ಮಠಪತಿˌಲಲಿತಾ ವಡ್ಡರˌಮಲ್ಲಪ್ಪ ತೇಲಿˌಶರಣಪ್ಪ ಬಚ್ಚನ್ನವರˌಮಂಜುನಾಥ ಕತ್ತಿˌಮಲ್ಲಪ್ಪ ನಾವಿˌಶಂಕರ ಕಾಂಬಳೆˌಪಾರಿಸ ಬಳೋಜˌಮಹಾದೇವ ಕಳ್ಳಿಗುದ್ದಿ ಮೊದಲಾದವರು ಉಪಸ್ಥಿತರಿದ್ದರು.

ಶ್ರೀಕಾಂತ ಹಳ್ಳೂರ ನಿರೂಪಿಸಿದರು.ಜ್ಯೋತಿ ಮಹಾಬಳಶೆಟ್ಟಿ ಸ್ವಾಗತಿಸಿದರು.ಸುಮಿತ್ರಾ ಮಗೆಣ್ಣವರ ಶರಣು ಸಮರ್ಪಿಸಿದರು.


ವರದಿ :ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments