ಶೀರ್ಷಿಕೆ : *ಏಕಾಂಗಿ ಆಲಾಪ*
ಒಂಟಿಯಾಗಿ ಬಸವಳಿದಿರುವೆ
ಜಂಟಿಯಾಗಲು ಕರೆದಿರುವೆ
ವಿರಹ ವೇದನೆ ಸಾಕೆಂದಿರುವೆ
ಏಕಾಂಗಿಯ ಆಲಾಪ ಹೇಳ ದಾಗಿರುವೆ
ಯಾರೂ ಇಲ್ಲದ ವೇಳೆಯಲಿ
ನಿನ್ನ ನೆನಪೇ ಕಾಡುತಲಿ
ನೀ ಬಳಿ ಬಂದಂತೆ ಅನಿಸುತಲಿ
ತಬ್ಬಿ ಹಿಡಿದು ಕಾಡುವಲ್ಲಿ
ನಿನ್ನಾಸೆಗಳ ಕನಸ ಹೊತ್ತಿರುವೆನಲ್ಲ
ಈಡೇರಿಸದಿದ್ದರೆ ಬಿಡುವುದಿಲ್ಲ
ನನಗೂ ಭಯವಿದೆ ನಿನಗೂ ನೆನಪಿದೆಯಲ್ಲ
ನಾನು ಒಂಚೂರು ಸೀದಾ ಸಾದಾ ಹುಡುಗ ಗೊತ್ತಲ್ಲ
ಇವೆಲ್ಲದರ ಆಸೆ ಹಾಗೆ ಉಳಿಯಬೇಕೆ
ನೀ ಬಂದು ತಣಿಸಲು ಕರೆ ಕೊಡಬೇಕೆ
ನಿನಗೂ ಆಸೆ ಇದೆ ಎಂದು ನನಗೂ ಗೊತ್ತಲ್ಲ ಮನಕೆ
ಏಕಾಂಗಿ ಆಲಾಪ ಕೊನೆಗೂ ಫಲಿಸಲು ಸೂಚನೆ ಕೊಡಬೇಕೆ
✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments