ಯೋಗಯುಕ್ತ ರೋಗಮುಕ್ತ:ಶಿವಾನಂದ ಭಾಗೋಜಿಮಠ
ರಾಯಬಾಗ
ಯೋಗದಿಂದ ಕಾರ್ಯಕ್ಷಮತೆ ಇಮ್ಮಡಿಗೊಳ್ಳುತ್ತದೆ.ಯೋಗಯುಕ್ತ ರೋಗಮುಕ್ತ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕೆಂದು ಶಿವಾನಂದ ಭಾಗೋಜಿಮಠ ಹೇಳಿದರು.ಅವರು ಸನಿಹದ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಯೋಗ ಬದುಕಿನ ಸುಂದರ ಜೀವನ ವಿಧಾನವಾಗಿದೆ.ಯೋಗವಿಜ್ಞಾನ ನಿಧಿಯನ್ನು ಭಾರತವು ಜಗತ್ತಿಗೆ ನೀಡಿದ ಅಮೂಲ್ಯ ಉಡುಗೊರೆಯಾಗಿದೆಯೆಂದು ಅರುಹಿದರು.
ನದಿ ಇಂಗಳಗಾವಿಯ ಕಲಾನವಿಲುಗಳಾದ ಪ್ರತಿಕ್ಷಾ ಕೋಳಿˌತನು ಚೆನ್ನಣ್ಣವರ ಪುಷ್ಪಾಂಜಲಿ ಭರತನಾಟ್ಯˌರಿಂಗ ಡ್ಯಾನ್ಸ ಭರತನಾಟ್ಯ ಮತ್ತು ವಚನ ನೃತ್ಯವನ್ನು ಪ್ರದರ್ಶಿಸಿ ಯೋಗ ದಿನಾಚರಣೆಯನ್ನು ಅವಿಸ್ಮರಣೀಯಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಮುಖ್ಯೋಪಾಧ್ಯಾಯ ರವೀಂದ್ರ ಪಾಟೀಲ ಮಾತನಾಡಿ ಮಕ್ಕಳು ಜ್ಞಾನಯೋಗಿಗಳಾಗುವುದರ ಜೊತೆಗೆ ಕಲಾರಾಧಕರಾಗಿ ಸಾಂಸ್ಕೃತಿಕ ಸಂಪತ್ತಿನ ವಾರಸುದಾರರಾಗಬೇಕೆಂದು ತಿಳಿಸಿದರು.ನಾಟ್ಯ ವೈಭವ ಕಣ್ತುಂಬಿಕೊಳ್ಳುವ ಸುಯೋಗ ಬಂದಿರುವುದು ಈ ನೆಲದ ಭಾಗ್ಯವೆಂದು ಉಸುರಿದರು.
ಸುಮಿತ್ರಾ ಮಗೆಣ್ಣವರˌಶಂಕರ ಕಾಂಬಳೆˌಜ್ಯೋತಿ ಮಹಾಬಳಶೆಟ್ಟಿˌಪಾರೀಸ ಬಳೋಜˌಲಕ್ಷ್ಮೀ ಮಗದುಮ್ಮˌಸವಿತಾ ಸಣಸನ್ನಿˌಗೀತಾ ಬಟಗುರ್ಕಿˌವಿವೇಕ ಬಿ.ಪಾಟೀಲˌವಾಣಿ ಕಂಬಾರˌಸುಶ್ಮಿತಾ ಬಚ್ಚನ್ನವರˌಪ್ರಜ್ವಲ ತೇಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸಾಕ್ಷಿ ಮಠಪತಿ ಪ್ರಾರ್ಥನೆಗೈದರು.ಮಹಾದೇವ ಕಳ್ಳಿಗುದ್ದಿ ಸ್ವಾಗತಿಸಿದರು. ಶ್ರೀಕಾಂತ ಹಳ್ಳೂರ ನಿರೂಪಿಸಿದರು.ದಾವಲಸಾಬ ಅರಳಿಕಟ್ಟಿ ಶರಣು ಸಮರ್ಪಿಸಿದರು.
ವರದಿ :ಡಾ. ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments