ಹಿಡಕಲ್ : ವಿದ್ಯಾರ್ಥಿಗಳು ಪಠ್ಯಕ್ರಮಕ್ಕೆ ಸೀಮಿತವಾಗಿದರೆ, ಪಠ್ಯತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ :ಸಾಹಿತಿ ಟಿ ಎಸ್ ಒಂಟಗೂಡಿ
ಶ್ರೀ ಸತ್ಯ ಪ್ರಭು ಶಿಕ್ಷಣ ಸಂಸ್ಥೆಯ ಶ್ರೀ ಲಕ್ಕಮ್ಮದೇವಿ ಕನ್ನಡ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಿಡಕಲ್ಲದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ವನಮಹೋತ್ಸವ ಕಾರ್ಯಕ್ರಮ ಜರಗಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಹಿಡಕಲ್ ಗ್ರಾಮದ ವಸಂತರಾವ ಪಾಟೀಲ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಸಾಹಿತಿ ಟಿ ಎಸ್ ಒಂಟಗೂಡಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರದೆ ಸದೃಢವಾದ ಶರೀರದಲ್ಲಿ ಸದೃಢವಾದ ಮನಸ್ಸು ನೆಲೆಸಬೇಕಾದರೆ ಆಟೋಟಗಳಲ್ಲಿ ಭಾಗವಹಿಸಬೇಕು ನೃತ್ಯ,ಕಲೆ,ಸಂಗೀತ,ಕ್ರೀಡೆ ಮುಂತಾದವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.
ಪ್ರತಿಯೊಬ್ಬರೂ ಹಸಿರೇ ಉಸಿರು ಎನ್ನುವಂತೆ ತಮ್ಮ ತೋಟದ ಅವರಣದಲ್ಲಿ ಸಸಿಗಳನ್ನು ನೆಟ್ಟು ಶಿಶುಗಳಂತೆ ಬೆಳೆಸಿ ರಕ್ಷಿಸಬೇಕೆಂದು ಸಾಹಿತಿ ಒಂಟಗೂಡಿ ಅಭಿಮತ ವ್ಯಕ್ತಪಡಿಸಿದರು. ಅತಿಥಿಗಳಾಗಿ ಹಾರೂಗೇರಿಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಭೂಗೋಳ ಶಾಸ್ತ್ರದ ಪ್ರಾಧ್ಯಾಪಕರಾದ ಪ್ರೊಫೆಸರ್ ಗೌಡಪ್ಪ ಅಳ್ಳಿಮಟ್ಟಿ ಮಾತನಾಡಿ ಪ್ರತಿಯೊಬ್ಬರು ಕಲಿತ ಶಾಲೆಗೆ ಕಲಿಸಿದ ಗುರುಗಳಿಗೆ ತಂದೆ-ತಾಯಿಯರಿಗೆ ಗೌರವ ಕೊಡಬೇಕು.ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿ ಮಾನಸಿಕ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕೆಂದು ಪ್ರೊಫೆಸರ್ ಗೌಡಪ್ಪ ಅಳ್ಳಿಮಟ್ಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರ್ಮನ್ನರಾದ ಎಂ ಪಿ ಕಂಟಿಕಾರ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಎಸ್ಎನ್ ಬಿದರಿ,ಎಂ ಎ ಪಾಟೀಲ್ ಎ ಎಸ್ ಮಾಂಗ,ಪ್ರಧಾನ ಗುರು ಭಗವಂತ ಕಂಟಿಕಾರ, ಅಪ್ಪು ನಾವಿ ಅಕ್ಷತಾ ಚಾಮಲ್ಲಿ,ರೂಪಾ ಸಾಮನೆ ಅನಮ್ ಇನಾಮದಾರ,ಸುಜಾತ ಮಾಂಗ,ಚಿತ್ರಕಲಾ ಶಿಕ್ಷಕ ಗೋವಿಂದ ತಳವಾರ, ಅಕ್ಷಯ ಪಾರ್ಥನಳ್ಳಿ,ಸಿದ್ದರಾಮೇಶ್ವರ ಕಂಟಿಕಾರ ಉಪಸ್ಥಿತರಿದ್ದರು. ಭುವನೇಶ್ವರಿ ಕಂಟಿಕಾರ ಸ್ವಾಗತಿಸಿ ನಿರೂಪಿಸಿದರು ಸುಧಾ ಪತ್ತಾರ ವಂದಿಸಿದರು.
ವರದಿ :ಡಾ. ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments