* ನಲ್ಲ ನಾನು ನನ್ನ ನಲ್ಲೆ ನೀನು *

 ನಲ್ಲ ನಾನು ನನ್ನ ನಲ್ಲೆ ನೀನು


ಸಿಹಿ ಜೇನಿನ ಒಲವಲ್ಲೇ

ನಗುತ ಇರುವ ನಾನು ನೀನು.


ಪ್ರಿಯಕರ ನಾನು ನನ್ನ ಪ್ರಿಯತಮೆ ನೀನು

ಅಗಲದಂತೆ ಪ್ರೇಮಸೆರೆಯಲಿ

ಬಂಧಿಯಾಗುವ ನಾನು ನೀನು.


ಪ್ರೇಯಸಿ ನೀನು ನಿನ್ನ ಪ್ರೇಮಿ ನಾನು

ಪ್ರೀತಿಸಿ ಅನುಕ್ಷಣ

ಒಲವಿನ ಹಕ್ಕಿಗಳಾಗುವ ನಾನು ನೀನು.


ಮಾಯೆ ನೀನು ನಿನ್ನ ಛಾಯೆ ನಾನು

ಪ್ರತೀ ಹೆಜ್ಜೆ ಜೊತೆ ಸೇರಿಸುತ

ಆತ್ಮ ಸಂಗಾತಿಗಳಾಗುವ ನಾನು ನೀನು.


       *- ಶ್ರೀಧರ ದೊಡಮನಿ...✍️*

Image Description

Post a Comment

0 Comments