* ನನ್ನ ಜನ "

 "ನನ್ನ ಜನ"



ಇಳೆಯ ಗರ್ಭದಲ್ಲಿರುವ

ಜ್ವಾಲೆಯು ಕುದಿಯುತ್ತಾ

ಪುಟಿದೇಳಲು ತವಕಿಸುವ ಪರಿಯಂತೆ ಈ ಜಗದಲಿ ನೊಂದು-ಬೆಂದವರು

ತುಳಿತಕ್ಕೊಳಗಾದ ನನ್ನ ಜನರ ಸಹನೆಯು ಕಟ್ಟೆಯೊಡೆಯುವ

ಕ್ಷಣಗಳು ಗೋಚರಿಸುತಿವೆ.


ಕತ್ತಲಿನಲ್ಲಿ ನಡೆದು 

ಬೆಳಕನು ಹುಡುಕಿ ನಡೆಯುತ

ಭಯವ ಬಿಟ್ಟು ಧೈರ್ಯದಿ

ಮುನ್ನುಗ್ಗಿ ದಾಸ್ಯವ ತೊರೆದು

ಸಿಡಿದೇಳಲು ಸಜ್ಜಾಗಿಹರು

ನನ್ನ ಜನ


ಶ್ರೀಮಂತರ ಅಟ್ಟಹಾಸದೊಡನೆ

ಊಳಿಗಮಾನ್ಯವು ಕೊನೆಗೊಂಡು

ಗರ್ವದಿ ಪುಟಿದೆದ್ದು 

ಎದೆತಟ್ಟಿ ನಾ ಜೀತದವನಲ್ಲ ಎಂದೇಳುವ ಧೈರ್ಯವ ಪಡೆದಿಹರು ನನ್ನ ಜನ


ಗತಕಾಲದ ಗೊಡ್ಡು ಸಂಪ್ರದಾಯದ ಇತಿಹಾಸವನು ಬದಲಿಸಿ

ಹೊಸ ಇತಿಹಾಸದ ಪುಟಗಳನ್ನು 

ಬರೆಯಲು ಸಜ್ಜಾಗಿ

ಪರಿಪಕ್ವವಾದ ಜ್ಞಾನವ ಪಡೆದಿಹರು ನನ್ನ ಜನ

 

ಅಂಬೇಡ್ಕರ್ ಮಾರ್ಗದಿಂ ಸ್ಪೂರ್ತಿಯ ಪಡೆದು

ಜೀವದ ಗತಿಯ ಬದಲಾವಣೆಯ ತಾನೇ ಅರಸುತ

ಬದುಕುವರು ಸ್ವಾತಂತ್ರ್ಯದ ಬೆಳಕಲ್ಲಿ 

ಅರುಣೋದಯವ ಹುಟ್ಟುಹಾಕುವರು ನನ್ನ ಜನ



ಡಾ. ಮಾಸ್ತಿ ಬಾಬು

ಅಧ್ಯಾಪಕರು, ಲೇಖಕರು, ಸಾಹಿತಿ, ಸಂಪನ್ಮೂಲ ವ್ಯಕ್ತಿ

ಬೆಂಗಳೂರು

Image Description

Post a Comment

0 Comments