*ಚಿಕ್ಕೂಡ ಶಾಲೆಯಲ್ಲಿ ಪರಿಸರೋತ್ಸವ ನಿತ್ಯೋತ್ಸವವಾಗಲಿ: ಲಕ್ಷ್ಮಣ ಪಾಟೀಲ*
ರಾಯಬಾಗ
ಪರಿಸರ ದಿನಾಚರಣೆಯಂದು ಪರಿಸರ ಕಾಳಜಿ ಮೆರೆದು ಮೈಮರೆಯಬಾರದು.ಪರಿಸರೋತ್ಸವ ನಿತ್ಯೋತ್ಸವವಾಗಬೇಕೆಂದು ಎಸ್.ಡಿ.ಎಮ್.ಸಿ ಅಧ್ಯಕ್ಷ ಲಕ್ಷ್ಮಣ ಪಾಟೀಲ ಅಭಿಮತ ಹಂಚಿಕೊಂಡರು.ಅವರು ಸನಿಹದ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಜೇಂದ್ರ ಕುಮಠಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಮುಖ್ಯೋಪಾಧ್ಯಾಯ ರವೀಂದ್ರ ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ.ನಮ್ಮ ರಕ್ಷಾ ಕವಚವನ್ನು ನಾವೇ ಸಂರಕ್ಷಿಸಬೇಕೆಂದು ಹೇಳಿದರು.ಪ್ರೀತಿ ಸಂಕೋನಟ್ಟಿˌಸಹನಾ ಕತ್ತಿˌಶಿಲ್ಪಾ ವಡ್ಡರˌಸಾಕ್ಷಿ ಮಠಪತಿ ಸಸಿಗಳನ್ನು ದಾಸೋಹಗೈದರು.ಸಾವನಕುಮಾರ ಗಸ್ತಿˌಶಂಕರ ಕಾಂಬಳೆˌಪಾರಿಸ ಬಳೋಜˌಸುಮಿತ್ರಾ ಮಗೆಣ್ಣವರˌಜ್ಯೋತಿ ಮಹಾಬಳಶೆಟ್ಟಿˌಶ್ರೀಕಾಂತ ಹಳ್ಳೂರˌಲಕ್ಷ್ಮೀ ಮಗದುಮ್ಮ ಉಪಸ್ಥಿತರಿದ್ದರು.ಸುಶ್ಮಿತಾ ಬಚ್ಚನ್ನವರ ನಿರೂಪಿಸಿದರು.ದಾವಲಸಾಬ ಅರಳಿಕಟ್ಟಿ ಸ್ವಾಗತಿಸಿದರು.ಅಂಕಿತಾ ಕುಮಟಿ ಶರಣು ಸಮರ್ಪಿಸಿದರು.
ವರದಿ :ಡಾ. ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments