*ಶಿರಗುಪ್ಪಿ: ಕೆ ಎಲ್ ಇ ಕಾಲೇಜಿಗೆ ಎಲ್ ಆಯ್ ಸಿ ಭೇಟಿ*
*ರಾಯಬಾಗ:* ಪ್ರತಿಷ್ಠಿತ ಕೆ ಎಲ್ ಇ ವಾಣಿಜ್ಯ ಪದವಿ
ಮಹಾವಿದ್ಯಾಲಯ ಶಿರಗುಪ್ಪಿಯಲ್ಲಿ ದಿನಾಂಕ 6 ರಂದು ಬೆಳಿಗ್ಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಸ್ಥಾನಿಕ ತಪಾಸಾಣಾ ಸಮಿತಿ ತಂಡದ (ಎಲ್ ಆಯ್ ಸಿ )ಅಧ್ಯಕ್ಷರಾದ ಪ್ರೊ ಅಶೋಕ ಎ. ಡಿ 'ಸೋಜ" ಸದಸ್ಯರುಗಳಾದ ಡಾ ಆದಿನಾಥ ಉಪಾಧ್ಯೆ, ಡಾ ರಮೇಶ್ ಎಂ. ಎನ್ ಭೇಟಿ ನೀಡಿದರು. ಶೈಕ್ಷಣಿಕ ಗುಣಮಟ್ಟ, ಪ್ರಮುಖ ಪೂರಕ ಶೈಕ್ಷಣಿಕ ದಾಖಲೆಗಳ ಪರೀಶೀಲನೆ, 2 ,4, ಹಾಗೂ 6 ನೇ ಸೆಮಿಸ್ಟರ ತರಗತಿಗಳನ್ನು ಖುದ್ದು ವೀಕ್ಷಿಸಿದ ನಂತರ ಸೂಕ್ತ ಗುಣಾತ್ಮಕ ಸಲಹೆಗಳನ್ನು ನೀಡಿದರು. ಪ್ರಾಚಾರ್ಯರಾದ ಪ್ರೊ ಎಸ್ ಬಿ ಪಾಟೀಲ, ಪ್ರಾಧ್ಯಾಪಕರು, ವಾಣಿಜ್ಯ ವಿಭಾಗದ ಸಂಯೋಜಕರಾದ ಪ್ರೊ ಎಲ್.ಎಸ್ ವಂಟಮೂರೆ, ಮಹಾವಿದ್ಯಾಲಯದ ಬೋಧಕ ಸಿಬ್ಬಂದಿಗಳಾದ ಕನ್ನಡ ಪ್ರಾಧ್ಯಾಪಕರು, ಸಾಹಿತಿ ಡಾ. ಜಯವೀರ ಎ.ಕೆ. ಪ್ರೊ ಬಿ. ಆರ್ ನರವಾಡೆ, ಪ್ರೊ ಎ. ಎಸ್ ಶಿರಗುಪ್ಪೆ, ಪ್ರೊ ರಾಧಿಕಾ ಯಾದವ, ಪ್ರೊ ಸಿ ಎಸ್ ಸುತಾರ, ಹಾಗೂ ಪ್ರೊ ಸಿ. ಬಿ ಕರಿಗಾರ ಗ್ರಂಥಪಾಲಕ ಪ್ರೊ ಎಸ್ ಟಿ ಬೆನಾಡೆ ಹಾಗೂ ದೈಹಿಕ ನಿರ್ದೇಶಕರಾದ ಶ್ರೀ ಎಂ. ಎಸ್ ಕೌಲಗುಡ್ಡ ಉಪಸ್ಥಿತರಿದ್ದರು.
*ವರದಿ:ಡಾ. ಜಯವೀರ ಎ.ಕೆ.*
*ಖೇಮಲಾಪುರ*
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments