* ರವಿವಾರದಂದು ಹಾರೂಗೇರಿಯಲ್ಲಿ ಕಲಾ ವೈಭವ *

 *ರವಿವಾರದಂದು ಹಾರೂಗೇರಿಯಲ್ಲಿ ಕಲಾ ವೈಭವ*



ರಾಯಬಾಗ

 ಹಾರೂಗೇರಿಯ ಖ್ಯಾತ ಭರತ ನಾಟ್ಯ ಕಲಾವಿದೆ ರಾಧಿಕಾ ಪತ್ತಾರ ಅವರು ಕಲೆ ಆರಾಧನೆ ಮಾಡುತ್ತಾ ನಾಟ್ಯ ತರಬೇತಿ ಕೊಡುತ್ತಿರುವುದಕ್ಕೆ ಆರು ವಸಂತಗಳು ತುಂಬಿದ ಸವಿನೆನಪುಗಳ ಮೆರವಣಿಗೆ ನಿಮಿತ್ಯ ಕಲಾ ವೈಭವ ಕಾರ್ಯಕ್ರಮವನ್ನು ಶರದಿ ನೃತ್ಯ ಕಲಾ ಅಕಾಡೆಮಿ ಹಾರೂಗೇರಿಯವರು ಹಮ್ಮಿಕೊಂಡಿದ್ದಾರೆ.ದಿನಾಂಕ 2-6-2024 ರಂದು ಮುಂಜಾನೆ 9:30 ಗಂಟೆಗೆ ಹಾರೂಗೇರಿಯ ಕಾಳಿಕಾದೇವಿ ದೇವಸ್ಥಾನದ ಸಭಾ ಭವನದಲ್ಲಿ ಜರುಗುವ ಕಲಾ ವೈಭವ ಕಾರ್ಯಕ್ರಮವನ್ನು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಉದ್ಘಾಟಿಸುವರು.ಮುಗಳಖೋಡದ ಸುಪ್ರಸಿದ್ಧ ನೇತಾರ ಡಾ.ಸಿ.ಬಿ.ಕುಲಿಗೋಡ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು ಪ್ರಾಚಾರ್ಯ ಸಂತೋಷ ಸನದಿˌಚಿಕ್ಕೊಡಿಯ ಭರತ ಕಲಾಚಂದ್ರರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಸಾಹಿತಿಗಳುˌಕಲಾವಿದರುˌಕಲಾಭಿರುಚಿಯುಳ್ಳವರುˌಸಾಧಕರುˌಗಣ್ಯಮಾನ್ಯರು ಉಪಸ್ಥಿತರಿರಲಿದ್ದಾರೆಂದು ಶರದಿ ನೃತ್ಯ ಕಲಾ ಅಕಾಡೆಮಿಯ ನಿಯೋಜಿತ ಅಧ್ಯಕ್ಷೆ ಯಶೋಧಾ ಗಜಾನನ ಪತ್ತಾರ ತಿಳಿಸಿದ್ದಾರೆ.ಹತ್ತಕ್ಕಿಂತ ಹೆಚ್ಚು ವೈವಿಧ್ಯಮಯ ನೃತ್ಯಗಳು ಪ್ರದರ್ಶನಗೊಂಡು ಕಲಾರಸಿಕರ ಮನ ತಣಿಸಲಿವೆ.ಈ ಸಂದರ್ಭದಲ್ಲಿ ಕಲಾಕಾರರನ್ನು ಗೌರವಿಸಿ ಪ್ರಶಸ್ತಿ ಪತ್ರ ಕೊಡಲಾಗುವುದೆಂದು ರಾಧಿಕಾ ಪತ್ತಾರ ಪತ್ರಿಕೆಗೆ ತಿಳಿಸಿರುವರು.ಸಂತೋಷ ತಮದಡ್ಡಿˌಗಜಾನನ ಪತ್ತಾರˌರಾಧಿಕಾರವರ ಶಿಷ್ಯೋತ್ತಮರು ಹಾಜರಿದ್ದರು.


ವರದಿ : ಡಾ. ವಿಲಾಸ ಕಾಂಬಳೆ 

ಹಾರೂಗೇರಿ

Image Description

Post a Comment

0 Comments