*ಶುಭ ಸಂದೇಶ*

 *ಶುಭ ಸಂದೇಶ*



ಸತ್ಯ ಹೇಳಲೇ ಬೇಕಾಗಿದೆ ನಾ ಇಂದು

ನಿನ್ನವನಾಗುವ ಆಸೆ ನನಗಿದೆಯೆಂದು

ನನ್ನದೆನ್ನೊ ಪ್ರೀತಿ ನನಗಿಲ್ಲವೆಂದಲ್ಲ

ಮಿಡಿಯುವ ಹೃದಯದಿ ಕಪಟವಿಲ್ಲ


ನಿನ್ನ ಮೊಗವು ಮಾಸದು ಮನದಿಂದ

ಇರಬಯಸಿದೆ ನಿನ್ನೊಂದಿಗೆ ಅನುಬಂಧ

 ಅತಿರೇಕದ ಅವಿವೇಕಕ್ಕೆ ಮನ್ನಿಸು 

ಎದೆ ಬಡಿತಕೆ ಅಧರದ ಸವಿ ಉಣ್ಣಿಸು


ಭಾವನೆಗಳ ಬಂಧಿಸಿಡಲು ನನಗಾಗದು

ಶುಭ ಸಂದೇಶವ ವಿನಿಮಯ‌ ಸಮಯವಿದು

ನಿನ್ನ ನಯನಗಳೆ ಅದ್ಭುತ ನನ್ನ ಸೆಳೆಯಲು

ಪ್ರತಿಕ್ಷಣ ನನ್ನೆದೆಯಲಿ ನಾಳೆಯ ಕನಸ್ಸುಗಳು


ಈ ಪ್ರೀತಿ ಮೂಡಲು ಕಾರಣವೇನೋ..

ಹಸನಾಗಿ ಮಾಡು ಜೊತೆ ಸೇರಿ ಬಾಳನು

 ಈ ಮಧುರ ಪ್ರೇಮಕೆ ಗೆಲುವು ನಿಶ್ಚಿತ

ಭಯ ಪಡದಿರು ಜೊತೆಯಲಿ ನಾನಿರಲು


*ಅಶೋಕ ಬೇಳಂಜೆ*

Image Description

Post a Comment

0 Comments