ಈ ಜೀವನದ
ಸಂಸಾರ ಸಾಗರದಲಿ
ಅವಳಿಗಿಂತ ನಾನೇ ಹೆಚ್ಚು
ಹೊಂದಿಕೊಂಡಿದ್ದೇನೆ.
ಹೇಗೆಂದರೆ..
ಅವಳು ತೆಳ್ಳಗೆ ಬೆಳ್ಳಗೆ
ಮರವ ಬಳಸಿದ ಬಳ್ಳಿಯಂತೆ
ಬಳುಕುವಾಗಲೂ ಮೆಚ್ಚಿಕೊಂಡಿದ್ದೇನೆ
ಈಗ ಅದೇ ಮರದ
ಕಾಂಡದಂತೆ ಬದಲಾದರೂ
ಸುಧಾರಿಸಿಕೊಂಡು ಹೋಗುತ್ತಿದ್ದೇನೆ
*ಅಶೋಕ ಬೇಳಂಜೆ*
0 Comments