* ಹೇ ಚೆಲುವೆ *

 ಹೇ ಚೆಲುವೆ



ಹುಣ್ಣಿಮೆ ಬೆಳದಿಂಗಳಲಿ

ಮಂದವಾಗಿ ಮೂಡಿದ

ನಲುಮೆಯ ಚಿತ್ತಾರವೇ ನಿನ್ನದು...!!


ಮಿಣುಕು ದೀಪದಂತೆ

ಗಳಿಗೆಗೊಮ್ಮೆ ಹೊಳೆವ

ನಕ್ಷತ್ರದ ಹೊಳಪು ಕಣ್ಣಿನದು...!!


ತುಣುಕು ಚಂದ್ರನ

ಬೆಳಕು ಮೂಡಿದಂತ

ಮೊಗದ ಕಾಂತಿಯು ನಿನ್ನದು...!!


ಏ ಚೆಲುವೆ ನಗುವಿಗು ನಗುವೆಂಬ

ನಗದ ಸಾಲ ನೀಡುತ ನಗುತಿರು

ಸಾವಿರ ವರುಷ ಎನ್ನುವ ಹಂಬಲ ನನ್ನದು...!!


   - ದೊಡ್ಮನೆಹುಡ್ಗ ಶ್ರೀಧರ್

           ನವಲಗುಂದ

Image Description

Post a Comment

0 Comments