🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏
ಶೀರ್ಷಿಕೆ : *ಶಾಲಾ ದಿನಗಳ ತರ್ಲೆ ತುಂಟಾಟ*
ಶಾಲೆಗೆ ಹೋಗೋ ದಿನಗಳೇ ಸಂತಸವು
ನಮದೇ ಕಾರುಬಾರು ಎಂದು ನಡೆದೆವು
ಹೈ ಸ್ಕೂಲ್ ಓದುವಾಗ ನಮದೇ ಆಟವು
ಸಹಿಸದೆ ಟೀಚರ್ ಗಳ ಪೆಚ್ಚು ಮುಖವು
ಕೂರುವ ಬೆಂಚಿಗೂ ಕದನವು
ನಮ್ಮಿಷ್ಟ ಜಾಗಕ್ಕೂ ಜಗಳವು
ಮಾಸ್ತರು ಬಂದರೆ ಗಪ್ ಚುಪ್ ಕುಳಿತೆವು
ಕಣ್ ಸನ್ನೆಯಲೇ ಹೆದರಿಸೋ ಭಯವು
ಹೊಂ ವರ್ಕ್ ಮಾಡದ ದಿನವು
ಲೀಡರ್ ಗಳು ಹೆಸರನ್ನು ಬರೆದ ಸಮಯವು
ಪಕ್ಕದಲ್ಲಿ ಕೂತ ಪದ್ಮಳ ಜಡೆ ಎಳೆದ ತೀಟೆಯವು
ಅವಳು ಚಾಡಿ ಹೇಳಿ ಬೈಸಿದ ಗಳಿಗೆಯದು
ಏನೇ ಕಿತ್ತಾಡಿದರು ಕೂಡಿ ಶಾಲೆಗೆ ಹೊರಡುತ್ತಿದ್ದೆವು
ಎಲ್ಲವ ಮರೆತು ಒಂದಾಗಿ ಆಟವ ಆಡುತ್ತಿದ್ದೆವು
ಆ ದಿನಗಳೇ ಎಷ್ಟು ಚಂದದ ದಿನವು
ಎಲ್ಲೆಡೆ ಮೆರೆದು ಮನೆಗಳಿಗೆ ಲೇಟಾಗಿ ಹೋಗುತ್ತಿದ್ದೆವು.
✍️ *ಮಳೆಬಿಲ್ಲುಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments