* ಚಿಕ್ಕೂಡ ಪ್ರೌಢ ಶಾಲೆಯಲ್ಲಿ ಅರ್ಥಪೂರ್ಣವಾಗಿ ಸಂಪನ್ನಗೊಂಡ ಶಾಲಾ ಪ್ರಾರಂಭೋತ್ಸವ*

 *ಚಿಕ್ಕೂಡ ಪ್ರೌಢ ಶಾಲೆಯಲ್ಲಿ ಅರ್ಥಪೂರ್ಣವಾಗಿ ಸಂಪನ್ನಗೊಂಡ ಶಾಲಾ ಪ್ರಾರಂಭೋತ್ಸವ*



ರಾಯಬಾಗ


ಸನಿಹದ ಚಿಕ್ಕೂಡ ಸರಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿ ಸಂಪನ್ನಗೊಂಡಿತು.ಕಾರ್ಯಕ್ರಮದಲ್ಲಿ ಸ್ವಚ್ಛತೆˌಶಿಸ್ತು ಎದ್ದು ಕಾಣುತ್ತಿತ್ತು.ಶಾಲೆಗೆ ಶಾಲೆಯೇ ಸಡಗರ ಸಂಭ್ರಮದಲ್ಲಿ ಮುಳುಗಿತ್ತು.ಮುಖ್ಯೋಪಾಧ್ಯಾಯರು ಶಾಲೆಯ ಹೆಗ್ಗಳಿಕೆಗಳನ್ನು ಮೆಲುಕು ಹಾಕುತ್ತಾ ಶಿಕ್ಷಣದ ಮಹತ್ವ ವಿಷಯದ ಮೇಲೆ ಬೆಳಕು ಚೆಲ್ಲಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷ ಲಕ್ಷ್ಮಣ ಪಾಟೀಲ ವೀಣಾಪಾಣಿಯ ಭಾವಚಿತ್ರದ ಪೂಜೆಗೈದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಆರ್.ಎಮ್. ಪಾಟೀಲˌಶಿವಾನಂದ ತೇಲಿˌರಾಜೇಂದ್ರ ಕುಮಟಿˌಮಹಾಂತಯ್ಯ ಮಠಪತಿˌಸಾವನಕುಮಾರ ಗಸ್ತಿˌಶಂಕರ ಕಾಂಬಳೆˌಶ್ರೀಕಾಂತ ಹಳ್ಳೂರˌಸುಮಿತ್ರಾ ಮಗೆಣ್ಣವರˌಮಹಾದೇವ ಕಳ್ಳಿಗುದ್ದಿˌಜ್ಯೋತಿ ಮಹಾಬಳಶೆಟ್ಟಿˌಪಾರೀಸ ಬಳೋಜˌಲಕ್ಷ್ಮೀ ಮಗದುಮ್ಮ  ಮತ್ತಿತರರು ಹಾಜರಿದ್ದರು.ಸಾಕ್ಷಿ ಮಠಪತಿ ಶಾರದಾ ಸ್ತುತಿಯ ಶುಭಗೀತೆ ಬಿತ್ತರಿಸಿದರು. ಪೃಥ್ವಿರಾಜ ಕೋಳಿಗುಡ್ಡ ನಿರೂಪಿಸಿದರು.ವಾಣಿ ಕಂಬಾರ ಸ್ವಾಗತಿಸಿದರು.ದಾವಲಸಾಬ ಅರಳಿಕಟ್ಟಿ ಶರಣು ಸಮರ್ಪಿಸಿದರು.

ವರದಿ : ಡಾ. ವಿಲಾಸ ಕಾಂಬಳೆ 

ಹಾರೂಗೇರಿ 

Image Description

Post a Comment

0 Comments