*ಕನ್ನಡ ನಾಡಿನ ಅಸ್ಮಿತೆ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆ: ಗುರು ಮಠಪತಿ*

 *ಕನ್ನಡ ನಾಡಿನ ಅಸ್ಮಿತೆ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆ: ಗುರು ಮಠಪತಿ* 



ರಾಯಬಾಗ

ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಕನಸಿನ ಕೂಸು ಕನ್ನಡ ಸಾಹಿತ್ಯ ಪರಿಷತ್ತು ಇಂದು ಜಗದಗಲ ತನ್ನ ರೆಂಬೆ ಕೊಂಬೆಗಳನ್ನು ಚಾಚಿ ನಿಂತು ಕನ್ನಡದ ಅನನ್ಯ ಅಸ್ಮಿತೆಯಾಗಿದೆಯೆಂದು ಶಿಕ್ಷಕ ಗುರು ಮಠಪತಿ ಹೇಳಿದರು.ಅವರು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ರಾಯಬಾಗ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ 110 ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅತಿಥಿ ಉಪನ್ಯಾಸಕರಾಗಿ ಮಾತನಾಡುತ್ತಾ ಕನ್ನಡವನ್ನು ಬೆಳೆಸಿ ಬೆಳೆದ ಬಲಶಾಲಿ ಕನ್ನಡ ಸಂಘಟನೆ ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಹೆಮ್ಮೆಯೆಂದು ಉಸುರಿದರು.ಸಂತೋಷ ಸನದಿ ಅಧ್ಯಕ್ಷತೆ ವಹಿಸಿದ್ದರು.ಚಲನಚಿತ್ರ ನಾಯಕ ನಟ ಶೀತಲರಾಜ ನಾಗನೂರ ಕಾರ್ಯಕ್ರಮವನ್ನು ಹಣತೆ ಬೆಳಗಿಸಿ ಉದ್ಘಾಟಿಸಿದರು.ಕನ್ನಡ ಭಾಷಾ ಶಿಕ್ಷಕ ಬಿ.ವಿ.ಪೂಜೇರಿ ಅತಿಥಿಗಳಾಗಿ ಕನ್ನಡದ ಹಿರಿಮೆ ಬಣ್ಣಿಸಿದರು.

  ಪಲ್ಲವಿ ಕಾಂಬಳೆಯವರ ನನ್ನವರ ಒಡಲುರಿ ಕವನ ಸಂಕಲನ ಬಿಡುಗಡೆಯಾಯಿತು. ಕನ್ನಡ ಪ್ರಾಧ್ಯಾಪಕಿ ತ್ರಿಶಲಾ ನಾಗನೂರ ಪುಸ್ತಕ ಬಿಡುಗಡೆಗೊಳಿಸಿ ಕೃತಿಯ ಹೆಗ್ಗಳಿಕೆಗಳನ್ನು ಬಿತ್ತರಿಸಿದರು.

 ಪುಟ್ಟ ಕಲಾಚೇತನˌ ಕನ್ನಡತಿ ಸುರಭಿ ಮೊಕಾಶಿಯವರನ್ನು ಗೌರವಿಸಲಾಯಿತು.ರಂಗೋಲಿ ಕಲಾವಿದ ಬಾಬು ಭಾಸ್ಕರ ಜಮಾದಾರˌನಿಶಾ ಶಿಂಗೆˌಅಮೃತಾ ಒಂಟೆˌರಾಧಿಕಾ ಪತ್ತಾರ ಅವರನ್ನು ಕ.ಸಾ.ಪ ತಾಲೂಕಾಧ್ಯಕ್ಷ ರವೀಂದ್ರ ಪಾಟೀಲ ಸತ್ಕರಿಸಿ ಆದರಿಸಿದರು.

ಗಜಾನನ ಪತ್ತಾರ ˌಶ್ರೀಶೈಲ ಮೊಕಾಶಿˌದೀಪಶ್ರೀ ಮೊಕಾಶಿˌರವಿ ಮೊಕಾಶಿˌಶಿವಪ್ಪ ಸರಿಕರˌಕುಮಾರ ಕಾಂಬಳೆˌಮಂಜುಳಾ ಗಲಗಲಿˌಶಶಿಧರ ಶಿಂಗೆˌನಿರ್ಮಲಾ ಶಿಂಗೆ ಜಯಶ್ರೀ ಒಂಟೆ ˌಡಾ.ರತ್ನಾ ಬಾಳಪ್ಪನವರˌಶಿವಾಜಿ ಮೇತ್ರಿˌ ಕನ್ನಡ ಸಾಹಿತ್ಯ ಪರಿಷತ್ತು ರಾಯಬಾಗ ತಾಲೂಕಾಧ್ಯಕ್ಷ ಆರ್.ಎಮ್.ಪಾಟೀಲ ಮತ್ತು ಕ.ಸಾ.ಪ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀಧರ ಹೊಳಕರ ನಿರೂಪಿಸಿದರು.ಟಿ.ಎಸ್.ವಂಟಗೂಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವಿಠ್ಠಲ ತೇರದಾಳೆ ಸ್ವಾಗತಿಸಿದರು.ಸಂತೋಷ ತಮದಡ್ಡಿ ಶರಣು ಸಮರ್ಪಿಸಿದರು.

ವರದಿ :ವಿಲಾಸ ಕಾಂಬಳೆ 

ಹಾರೂಗೇರಿ 

Image Description

Post a Comment

0 Comments